ಸ್ಪೇನ್ ವಿರುದ್ಧ ರಷ್ಯಾ ಗೆಲುವು, ಕ್ವಾರ್ಟರ್ ಫೈನಲ್ ಪ್ರವೇಶ

ರಷ್ಯಾ : ಮಾಸ್ಕೋದಲ್ಲಿ ನಡೆದ ಫೀಫಾ ವಿಶ್ವಕಪ್ ಪುಟ್ಬಾಲ್ 16 ರ ಘಟ್ಟದ ಪಂದ್ಯದಲ್ಲಿ ಅತಿಥೇಯ ರಷ್ಯಾ   4-3 ಪೆನಾಲ್ಟಿ ಮೂಲಕ ಸ್ಪೇನ್ ವಿರುದ್ಧ ಗೆದ್ದು  ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.120 ನೇ ನಿಮಿಷದಲ್ಲಿ  ರಷ್ಯಾ  ನಾಯಕ ಹಾಗೂ ಗೋಲು ಕೀಪರ್  ಇಗೊರ್ ಅಕಿನ್ ಪಿವ್  ,ಇಯಾಗೊ ಅಸ್ಪಾಸ್ ಹಾಗೂ ನಾಲ್ವರು ಆಟಗಾರರು ಪೆನಾಲ್ಟಿ ಶೂಟ್ ನಲ್ಲಿ ಸಿಡಿಸಿದ ಸ್ಟಾಟ್ ಕಿಕ್ ಗಳು  ಅತಿಥೇಯರನ್ನು 1-1ರ ಡ್ರಾನಲ್ಲಿ ತಂದು ನಿಲ್ಲಿಸಿತು.ಸ್ಪೇನ್1 ಸಾವಿರಕ್ಕೂ ಹೆಚ್ಚು ಪಾಸ್ ಗಳ ಮೂಲಕ  ಪಂದ್ಯದ ಮೇಲೆ ಹಿಡಿತ   ಸಾಧಿಸಿತ್ತು. ಆದರೆ. ಸುಸಂಘಟಿತ ರಷ್ಯಾ ಆಟಗಾರರು ರಕ್ಷಣಾತ್ಮಕದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ  4-3 ರ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.ಸ್ಪೇನ್  12 ನೇ ನಿಮಿಷದಲ್ಲಿ ಲೀಡ್ ನಲ್ಲಿದ್ದಾಗ  ರಷ್ಯಾದ ಸರ್ಜಿಯಾ ಇಗ್ನಾಸೆವಿಂಚ್  ಗೋಲು ಗಳಿಸಲು ಸ್ಪೇನ್ ತಂಡ ನಾಯಕ ಸರ್ಗಿಯೋ ರಾಮೊಸ್  ನೆರವಾದರು. 38 ವರ್ಷದ ರಕ್ಷಕನು ತನ್ನ ಹಿಮ್ಮಡಿಯೊಂದಿಗೆ ಚೆಂಡನ್ನು ನೆಟ್ ಗೆ ತಿರುಗಿಸಿದನು. 41 ನೇ ನಿಮಿಷದಲ್ಲಿ ಸ್ಪೇನ್ ರಕ್ಷಣಾ ದೋಷವು ರಷ್ಯಾ ಮಟ್ಟವನ್ನು ಹೆಚ್ಚಿಸಿತು.ಡಿಜ್ಯುಬಾದ ಪೆನಾಲ್ಟಿ ಕಿಕ್ ಗೋಲ್  ಕೀಪರ್  ಡೇವಿಡ್ ಡಿ ಜಿಯಾನನ್ನು ತಪ್ಪು ದಾರಿಗೆ  ನೂಕಿತು.ಸೊಚಿಯಲ್ಲಿ  ಶನಿವಾರ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ನಡೆಯಲಿದ್ದು, ರಷ್ಯಾ ಕ್ರೂಯೆಷಿಯಾ ಅಥವಾ ಡೆನ್ಮಾರ್ಕ್ ವಿರುದ್ಧ ಸೆಣಸಾಟ ನಡೆಸಲಿದೆ.

ರಷ್ಯಾ ಕ್ವಾರ್ಟರ್ ಫೈನಲ್ ಹಂತ ತಲುಪಿರುವುದರಿಂದ ಅತಿಥೇಯ ರಾಷ್ಟ್ರದ ಅಭಿಮಾನಿಗಳು ತಮ್ಮ ತಂಡದ ಮೇಲೆ ಸಾಕಷ್ಟು ಭರವಸೆ ಹೊಂದಿದ್ದಾರೆ.  ಸ್ಪೇನ್  ಪರವಾಗಿಯೇ ಯಾವಾಗಲೂ ಅದೃಷ್ಟ ಇರುವುದಿಲ್ಲ ಎಂದು  ರಷ್ಯಾ ನಾಯಕ ಅಕಿನ್ ಪೀವ್ ಪಂದ್ಯ ಗೆದ್ದ ಬಳಿಕ  ಹೇಳಿದರು.

10 ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರಷ್ಯಾ ಗೆಲುವು ಸಾಧಿಸಿದ್ದು, ಯುರೋ 2008, 2010ರ ವಿಶ್ವಕಪ್,   2012 ರ ಯುರೋಪಿಯನ್ ಚಾಂಪಿಯನ್ ಶಿಪ್ ನಂತಗ  ಪ್ರಮುಖ ಮೂರು ಟೂರ್ನಿಗಳಲ್ಲಿ ಗೆಲುವು ಸಾಧಿಸಿದ್ದ ಸ್ಪೇನ್ ನಾಕೌಟ್ ಹಂತ ತಲುಪುವಲ್ಲಿ ಸ್ಪೇನ್  ವಿಫಲವಾಗಿದೆ.

ಈ ಬಾರಿಯ ವಿಶ್ವಕಪ್ ತೀವ್ರ ನೋವುಂಟುಮಾಡಿದೆ. ಮಾತನಾಡಲು ಏನೂ ಇಲ್ಲ ಎಂದು ಸ್ಪೇನ್ ನಾಯಕ ಸರ್ಜಿಯೊ ರಾಮೋ್ ಹೇಳಿದ್ದಾರೆ.  ಈ ಮೈದಾನದಲ್ಲಿ ನಮ್ಮ ಆತ್ಮವನ್ನು ಕಳೆದುಕೊಂಡಿದ್ದೇವೆ ಎಂದು ಅವರು ನುಡಿದಿದ್ದಾರೆ.

ಸುಮಾರು 78 ಸಾವಿರ ಸಾಮರ್ಥ್ಯದ  ಲುಜ್ ಹಿಕಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಈ ಪಂದ್ಯವನ್ನು ಕಣ್ತುಂಬಿಕೊಂಡರು.  ಸ್ಪೇನ್ ನ ನಾಲ್ಕನೇ ದೊರೆ ಪೆಲಿಪ್ , ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವಿಡೆವ್  ಸೇರಿದಂತೆ ಹಲವು ಮಂದಿ ಗಣ್ಯರು ವಿಶೇಷ ಅತಿಥಿಗಳಾಗಿ ಪಂದ್ಯವನ್ನು ವೀಕ್ಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ