ಪತಿಯ ಸ್ನೇಹಿತರಿಂದಲೇ ಪತ್ನಿಯ ಮೇಲೆ ಅತ್ಯಾಚಾರ

ಬೆಂಗಳೂರು:ಜು-2:ನಗರದ ಹೊರವಲಯದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳ ತಂಡ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ರಾಮನಗರ ತಾಲ್ಲೂಕಿನ ಕುಡುರ್ ಎಂಬಲ್ಲಿ ಈ ಘಟನೆ ನಡೆದಿದೆ.

ಆರೋಪಿಗಳು ಮಹಿಳೆಯ ಪತಿಯ ಸ್ನೇಹಿತರೇ ಆಗಿದ್ದಾರೆ ಎಂಬು ಆಘಾತಕರ ಸಂಗತಿಯಾಗಿದೆ.

ಗೃಹಿಣಿ ತನ್ನ 6 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದು ಆಕೆಯ ಪತಿ ಟ್ರಕ್ ಚಾಲಕರಾಗಿದ್ದಾರೆ. ಪತಿ ವಿಜಯ್(ಹೆಸರು ಬದಲಿಸಲಾಗಿದೆ) ಕೆಲಸ ನಿಮಿತ್ತ ಹೊರಹೋಗಿದ್ದರು. ಶನಿವಾರ ರಾತ್ರಿ 10.30ರ ಸುಮಾರಿಗೆ ಕರಡಿ ಗಂಗರಾಜು ಅಲಿಯಾಸ್ ಕುರುಡ, ಮಂಜುನಾಥ್ ಮತ್ತು ಪುರುಷೋತ್ತಮ ಎಲ್ಲರೂ ಸುಮಾರು 25ರಿಂದ 30 ವರ್ಷದೊಳಗಿನವರಾಗಿದ್ದು ವಿಜಯ್ ಮೊಬೈಲ್ ಸಂಖ್ಯೆ ಕೇಳಿಕೊಂಡು ಮನೆಗೆ ಬಂದಿದ್ದರು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹೇಳಿದ್ದಾರೆ ಎಂದು ಕೂಡ ಸುಳ್ಳು ಹೇಳಿದರು. ಕಿಟಕಿ ತೆರೆದು ಪತಿ ಹೊರ ಹೋಗಿದ್ದಾರೆ, ನಾಳೆ ಬೆಳಗ್ಗೆ ಬನ್ನಿ ಎಂದು ಮಹಿಳೆ ಹೇಳಿದ್ದಾಳೆ.

ಆರೋಪಿಗಳು ಸ್ವಲ್ಪ ಹೊತ್ತು ಮನೆಯ ಹೊರಗೆ ಕಾದು ನಂತರ ಮನೆಯ ಬಾಗಿಲು ಒಡೆದು ಮನೆಯೊಳಗೆ ನುಗ್ಗಿಬಂದು ಮಹಿಳೆಗೆ ಹೊಡೆದು ಆಕೆಯ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದರು. ಮಹಿಳೆ ಕೂಗಿಕೊಳ್ಳಲು ಆರಂಭಿಸಿದಾಗ ಟೇಪ್ ನಿಂದ ಬಾಯಿ ಮುಚ್ಚಿಸಿ ಆಕೆ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾದರು. ಸ್ವಲ್ಪ ಹೊತ್ತಿನ ಬಳಿಕ ಮಹಿಳೆಗೆ ಪ್ರಜ್ಞೆ ಬಂದು ಆಕೆಯ ನೆರೆಮನೆಯ ಗಂಗಮ್ಮನನ್ನು ಎಚ್ಚರಿಸಿದಳು. ಆಕೆ ಪೊಲೀಸರಿಗೆ ಕರೆ ಮಾಡಿ ಕೂಡಲೇ ಮಹಿಳೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಕುಡುರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಲ್ಲಿ ಗಂಗರಾಜುವನ್ನು ಬಂಧಿಸಿದ ಪೊಲೀಸರು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಹಿಳೆಗೆ ಪ್ರಜ್ಞೆ ಬಂದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಮಗ ಕೋಣೆಯಿಂದ ಕೂಗಿಕೊಳ್ಳುತ್ತಿದ್ದಂತೆ ನೆರೆಮನೆಯವಳನ್ನು ಎಚ್ಚರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ಪತಿ ಕೌಟುಂಬಿಕ ಕಲಹದಿಂದಾಗಿ ಕಳೆದೊಂದು ತಿಂಗಳಿನಿಂದ ಮನೆಗೆ ಬರುತ್ತಿಲ್ಲ. ಇದನ್ನು ತಿಳಿದ ಆರೋಪಿಗಳು ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಹೇಳುತ್ತಾರೆ. ಅತ್ಯಾಚಾರಕ್ಕೀಡಾದ ಮಹಿಳೆಯ ಪತಿಗೆ ಈ ಘಟನೆ ಕುರಿತು ಇನ್ನೂ ತಿಳಿದಿಲ್ಲ.

ಆರೋಪಿಗಳು ಹತ್ತಿರದ ಬಾರ್ ನಲ್ಲಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿಕೊಂಡು ನಂತರ ಫಾರ್ಮ್ ಹೌಸ್ ಗೆ ಬಂದಿದ್ದಾರೆ. ಆರೋಪಿಗಳು ಮೊದಲು ಮಹಿಳೆಯನ್ನು ಅಪಹರಿಸಲು ಯತ್ನಿಸಿದ್ದರು ಆದರೆ ಆಕೆ ಕೂಗಿಕೊಂಡಾಗ ಮನೆಯೊಳಗೆ ದೂಡಿ ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

Bengaluru,Rape, Woman, Husband friends

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ