ರೌಡಿಗಳ ವಿರುದ್ಧ ಕ್ಷೀಪ್ರ ಕಾರ್ಯಚರಣೆ

ಹುಬ್ಬಳ್ಳಿ- ಧಾರವಾಡ: ವಾಣಿಜ್ಯ ನಗರದಲ್ಲಿ ಇತ್ತೀಚಿಗೆ ರೌಡಿಸಂ, ಗಲಾಟೆ, ಚಾಕು ಇರಿತ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ನಗರದ ಜನತೆಯಲ್ಲಿ ಭಯದ ವಾತಾವರಣ ನಿರ್ಮಣವಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದಿದ್ದಾರೆ.

ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನಯ ತಪಾಸಣೆ ನಡೆಸಿ, ,22 ಬೈಕ್ ಹಾಗೂ 2 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ತಡರಾತ್ರಿ ಗುಂಪುಕಟ್ಟಿಕೊಂಡು, ಕೊಲೆ, ರೌಡಿಸಂ, ಗಲಾಟೆ, ಚಾಕು ಇರಿತ ಮಾಡುವ ಮೂಲಕ ಭಯದ ವಾತಾವರಣ ನಿರ್ಮಾಣವಾಗುತ್ತು. ಹೀಗಾಗಿ ಜನರಲ್ಲಿ ಭಯದ ವಾತೈ ನಿರ್ಮಾಣ ಮಾಡಲು ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರಿಗೆ ಎಚ್ಚರಿಕೆಯ ಎಚ್ಚರಕೆ ನೀಡಲು ಈ ಕಾರ್ಯಾಚರಣೆ ನಡೆಸಲಾಗಿದೆ.

ಎಸಿಪಿ ಎನ್ ಬಿ ಸಕ್ರಿ ನೇತೃತ್ವ ದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಿರೀಶ್ ಬೊಜ್ಜನವರ್, ಮಲ್ಲಯ್ಯ ಮಠಪತಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ