2ನೇ ಟಿ20 ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ಡುಬ್ಲಿನ್: ಭಾರತ ಐರ್ಲೆಂಡ್ ನಡುವಿನ ದ್ವಿತೀಯ ಟಿ 20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 143 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಭಾರತ ಒಡ್ಡಿದ್ದ 214  ರನ್ ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್  12.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 70 ರನ್ ಗಳಿಸಲಷ್ಟೇ ಸಮರ್ಥವಾಗಿತ್ತು. ಇದರೊಡನೆ ಟೀಂ ಇಂಡಿಯಾಗೆ 143 ರನ್ ಗೆಲುವು ಲಭಿಸಿದೆ.
ಅಷ್ಟಲ್ಲದೆ ಎರಡು ಪಂದ್ಯಗಳ  ಟ್ವೆಂಟಿ-20 ಸರಣಿಯನ್ನು ಸಹ 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಈ ಗೆಲುವು ಟಿ 20 ಫಾರ್ಮ್ ಕ್ರಿಕೆಟ್ ನಲ್ಲಿ ಭಾರತ ತಂಡದ ಅತ್ಯಂತ ದೊಡ್ಡ ಗೆಲುವಾಗಿದೆ.
ಇನ್ನು ಐರ್ಲೆಂಡಿನ ಆಟಗಾರರು ಯಾರೂ ಹೆಚ್ಚು ಸಮಯ ಕ್ರೀಸ್ ನಲ್ಲಿ ಉಳಿಯಲಿಲ್ಲ ಎಲ್ಲರೂ ಹೀಗೆ ಬಂದು ಹಾಗೆ ಹೋದವರೇ ಆಗಿದ್ದು ಅತಿಥೇಯರ ಪರವಾಗಿ ಪಾಲ್‌ ಸ್ಟಿರ್ಲಿಂಗ್‌ (0), ಜೇಮ್ಸ್ ಶಾನನ್ (2)ವಿಲಿಯಂ ಪೋರ್ಟರ್‌ಫೀಲ್ಡ್‌ (14), ಆ್ಯಂಡ್ರ್ಯೂ ಬಾಲ್ಬಿರ್ನಿ (9), ಗ್ಯಾರಿ ವಿಲ್ಸನ್‌ (15), ಕೆವಿನ್‌ ಓ’ಬ್ರಿಯೆನ್‌ (0), ಸಿಮಿ ಸಿಂಗ್ (0) ಜಾರ್ಜ್‌ ಡಾಕ್‌ರೆಲ್‌ (4), ಸ್ಟುವರ್ಟ್‌ ಥಾಂಪ್ಸನ್‌ (13) ಹಾಗೂ ಬಾಯ್ಡ್‌ ರಾರ‍ಯಂಕಿನ್‌ (10)  ರನ್ ಗಳಿಸಿದ್ದರು.
ಭಾರತದ ಪರವಾಗಿ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ತಲಾ 3 ವಿಕೆಟ್ ಕಬಳಿಸಿದ್ದರು. ಉಮೇಶ್ ಯಾದವ್ (2), ಸಿದ್ದಾರ್ಥ್ ಕೌಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ