‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

ಜಿಲ್ಲೆಯ ಪಾವಗಡ ತಾಲೂಕು ಪ್ರೇಕ್ಷಣಿಯ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಪಾವಗಡದಲ್ಲಿ ಸ್ಥಳೀಯರು ಮತ್ತು ಇತರೆ ಪ್ರದೇಶದಿಂದ ಬಂದ ಜನರು ಮಟ್ಕಾ ದಂದೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದರಿಂದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ಒಂದು ವಾರದಿಂದಲೇ ಈ ಅಭಿಯಾನವನ್ನು ಸ್ಥಳೀಯ ಯುವಕರು ಶುರು ಮಾಡಿದ್ದು, ಈಗಾಗಲೇ ಅಭಿಯಾನದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕು. ಪಾವಗಡ ಪಟ್ಟಣದ ವೈ.ಎನ್ ಹೊಸಕೋಟೆ, ನಿಡುಗಲ್, ನಾಗಲಮಡಿಕೆ ಸೇರಿದ್ದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಿತಿಮೀರಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಮಟ್ಕಾ ದಂಧೆಯಿಂದ ಸ್ಥಳೀಯ ಯುವ ಜನರು ಹಾಳಾಗುತ್ತಿದ್ದಾರೆ ಎಂದು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ