ಕೃಷಿ ಇಲಾಖೆ ಪವರ್ ಕಟ್

ಕೊಪ್ಪಳ:ಜೂ-30:ಕೊಪ್ಪಳ ನಗರದ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ವಿದ್ಯುತ್ ಸರಬರಾಜ ಇಲ್ಲದ ಕಾರಣದಿಂದ ಯಾವ ಕೆಲಸ ಕೈಗೊಳ್ಳದೆ, ಇಲ್ಲಿನ ಸಿಬ್ಬಂದಿ ಕತ್ತಲಲ್ಲಿ ಕಂಪ್ಯೂಟರ್ ಮುಂದೆ  ಕಳೆದ ಎರಡು ದಿನಗಳಿಂದ ಕೈಕಟ್ಟಿ ಕುಳಿತಕೊಂಡ ಪ್ರಸಂಗ ಜರುಗಿದೆ.

ಜೆಸ್ಕಾಂಗೆ 5 ತಿಂಗಳ ವಿದ್ಯುತ್ ಬಿಲ್ ಪಾವತಿಸದಿರುವ ಹಿನ್ನಲೆಯಲ್ಲಿ ಗುರುವಾರ ಜೆಸ್ಕಾಂ ಸಿಬ್ಬಂದಿ ಕಚೇರಿಗಿರುವ ವಿದ್ಯುತ್ ಸರಬರಾಜು ಕಟ್ ಮಾಡಿಹೊಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸದಾ ಸಂಪರ್ಕದಲ್ಲಿರಬೇಕಾದ ಕೃಷಿ ಇಲಾಖೆ ಕೆಲ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇರುವುದು ರೈತರ ಕೆಂಗಣ್ಣಿಗೂ ಕೂಡಾ ಗುರಿಯಾಗಿದ್ದಾರೆ.

ಸದಾ ಸುದ್ದಿ ಹಾಗೂ ಬ್ರಷ್ಟಾಚಾರದಲ್ಲಿ ತೊಡಗಿರುವ ಇಲ್ಲಿನ ಅಧಿಕಾರಿಗಳು ಕಳೆದ 5 ತಿಂಗಳಿನಿಂದ ಜೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಬೇಕಾಗಿರುವುದನ್ನು ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.

Koppala,Agriculture Department, Power Cut

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ