ಡಾಲರ್‌ ಎದುರು ಕೊಂಚ ಚೇತರಿಸಿದ ರೂಪಾಯಿ ಮೌಲ್ಯ

ನವದೆಹಲಿ:ಜೂ-29: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ತೀವ್ರ ಕುಸಿತ ಕಂಡಿದ್ದ ರೂಪಾಯಿ ವಿನಿಮಯ ದರ ಶುಕ್ರವಾರ ಬೆಳಗ್ಗೆ ಸ್ವಲ್ಪ ಚೇತರಿಸಿಕೊಂಡಿದೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 69 ರೂ.ಗಳಿಗೆ ಕುಸಿದಿದ್ದರೆ, ಸಂಜೆಯ ವೇಳೆಗೆ 18 ಪೈಸೆಗಳ ಏರಿಕೆ ಕಂಡು 68.79 ರೂ.ಗಳಿಗೆ ಸ್ಥಿರಗೊಂಡಿತು.

ಇಂದು ಬೆಳಗ್ಗೆ ವಹಿವಾಟು ಆರಂಭವಾದಾಗ ರೂಪಾಯಿ ಮೌಲ್ಯ 9 ಪೈಸೆಗಳಷ್ಟು ಚೇತರಿಕೆ ಕಂಡಿತು. ಬೆಳಗ್ಗೆ 10:15ರ ವೇಳೆಗೆ ರೂಪಾಯಿ ಮತ್ತಷ್ಟು ಚೇತರಿಕೆ ಕಂಡು 68.50 ಕ್ಕೆ ವಿನಿಮಯಗೊಂಡಿತು.

Rupee recovers from all-time low,remains under pressure

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ