ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯ

ಲುಜ್ನಿಕಿ ಸ್ಟೇಡಿಯಂ (ರಷ್ಯಾ): ಫಿಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸುವ ಮೂಲಕ ದಾಖಲೆ ಮಾಡಿದೆ..
ನಿಗದಿತ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ಗಳಿಸುವುದುದ್ ಸಾಧ್ಯವಾಗಲಿಲ್ಲ. ಆದರೆ ಇದೇ ವೇಳೆ ಎರಡೂ ತಂಡಗಳಿಗೆ ಡ್ರಾ ಫಲಿತಾಂಶವು ಅತ್ಯಂತ ಅಗತ್ಯವಾಗಿದ್ದು ಅದೇ ರೀತಿಯಲ್ಲಿ ಫಲಿತಾಂಶ ಬಂದಿದೆ. ಸಧ್ಯ ಈ ಫಲಿತಾಂಶದಿಂಡ ಎರಡೂ ತಂಡಗಳು 16ರ ಘಟ್ಟಕ್ಕೆ ತಲುಪಿದೆ.
ಇನ್ನು ವಿಶ್ವಕಪ್ ಪ್ರಾರಂಭದಿಂದ ಇಂದಿನವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಗೋಲು ಗಳಿಕೆ ಆಗಿದ್ದು ಡ್ರಾ ಅಥವಾ ಸ್ಪಷ್ಟ ಸೋಲು-ಗೆಲುವಿನ ಫಲಿತಾಂಶ ಬಂದಿತ್ತು. ಆದರೆ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯದಲ್ಲಿ ಗೋಲುಗಳಿಲ್ಲದೆ ಡ್ರಾ ಆಗಿರುವುದು ಸಹ ಒಂದು ದಾಖಲೆಯಾಗಿದೆ.
ಸಿ ಗುಂಪಿನಲ್ಲಿ ಮೂರರಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಫ್ರಾನ್ಸ್ 7 ಅಂಕದೊಡನೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದೇ ರೀತಿ ಡೆನ್ಮಾರ್ಕ್ 1 ಗೆಲುವು, 2  ಸೋಲಿನೊಂದಿಗೆ 5 ಅಂಕ ಗಳಿಸಿಕೊಂಡಿದ್ದು ಎರಡನೇ ಸ್ಥಾನದೊಡನೆ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ