ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ!

ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಸೋಮವಾರ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16 ಹಂತಕ್ಕೆ ತಲುಪಿವೆ.
ನಿನ್ನೆ ನಡೆದ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ಸ್ಪೇನ್ ತಂಡ ಪ್ರಬಲ ಮೊರಾಕ್ಕೋ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿತು. 1-2ರಲ್ಲಿ ಹಿಂದಿದ್ದ ಸ್ಪೇನ್ ತಂಡಕ್ಕೆ ಲಾಗೋ ಅಸ್ಪಾಸ್ ಕೊನೆ ಕ್ಷಣದಲ್ಲಿ ಗೋಲು ತಂದುಕೊಡುವ ಮೂಲಕ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗುವಂತೆ ನೋಡಿಕೊಂಡರು.
ಪೋರ್ಚುಗಲ್ ಮತ್ತು ಇರಾನ್ ವಿರುದ್ಧ ನಡೆದ ಮತ್ತೊಂದು ಪಂದ್ಯವೂ 1-1ರಲ್ಲಿ ಡ್ರಾದಲ್ಲಿ ಅಂತ್ಯಗೊಂಡಿತು. ಪೋರ್ಚುಗಲ್ ತಂಡದ ಪರ ಮತ್ತೆ ಕ್ರಿಸ್ಟಿಯಾನೋ ರೊನಾಲ್ಡೋ ಆಪದ್ಭಾಂಧವನಾಗಿ ನಿಂತರು. ವಿಎಆರ್ ನರೆವು ಪಡೆದ ರೊನಾಲ್ಡೋ, ಮುಂದಿನ ಕ್ಷಣದಲ್ಲೇ ಗೋಲ್ ಭಾರಿಸುವ ಮೂಲಕ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.
ಬಿ ಗುಂಪಿನಲ್ಲಿ ಇದೀಗ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16ರ ಹಂತಕ್ಕೆ ಮುನ್ನಡೆದಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ