ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ 2-1 ಅಂತರದ ಜಯ

ವೋಲ್ಗೊಗ್ರಾಡ್ ಅರೆನಾ(ರಷ್ಯಾ): ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸೋಮವಾರ ಸೌದಿ ಅರೇಬಿಯಾ ಎದುರಾಳಿ ಈಜಿಫ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.
ಪಂದ್ಯದ ಪ್ರಾರಂಭದಲ್ಲಿ ಈಜಿಪ್ಟ್ ನ ಪ್ರಮುಖ ಆಟಗಾರ ಮೊಹಮದ್ ಸಲಾಹ್ (22ನೇ ನಿಮಿಷ) ಗೋಲು ಗಳಿಸಿ ತಂಡದ ವಿಜಯಕ್ಕೆ ಪ್ರಯತ್ನಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಸೌದಿ ಅರೇಬಿಯಾ ತಂಡ ಎರಡು ಗೋಲುಗಳನ್ನು ಗಳಿಸಿಕೊಳ್ಳುವ ಮೂಲಕ ವಿಜಯವನ್ನು ದಕ್ಕಿಸಿಕೊಂಡಿದೆ.
ಸೌದಿ ಅರೇಬಿಯಾದ ಪರವಾಗಿ ಸಲ್ಮಾನ್ ಅಲ್ ಫರಾಜ್ (51ನೇ ನಿಮಿಷ), ಸೇಲಂ ಅಲ್ ದಾವ್ಸಾರಿ (90+5ನೇ ನಿಮಿಷ) ಗೋಲು ಗಳಿಸಿದ್ದರು.
ಪಂದ್ಯದ 50ನೇ ಹಾಗೂ 86ನೇ ನೇ ನಿಮಿಷಗಳಲ್ಲಿ ಈಜಿಪ್ಟ್ ನ ಇಬ್ಬರು ಆಟಗಾರರಾದ ಆಲಿ ಗ್ಯಾಬ್ ಮತ್ತು ಅಹ್ಮದ್ ಫಾತಿ ಅವರ ವಿರುದ್ಧ ಹಳದಿ ಕಾರ್ಡ್ ಪ್ರದರ್ಶಿಸಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ