ಟಾಲಿವುಡ್ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ನಿಶ್ಚಿತಾರ್ಥ!

ನವದೆಹಲಿ: ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು ತಮ್ಮ ಭಾವಿ ಪತಿಯ ಕುರಿತ ರಹಸ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.
ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ತಮ್ಮ ನಿಶ್ಚಿತಾರ್ಥಕ್ಕೆ 14 ವರ್ಷದ ಮಗ ಅಖಿರ ನಂದನ್ ಮತ್ತು 8 ವರ್ಷದ ಮಗಳು ಆರಾಧ್ಯ ಬಂದಿದ್ದು ಖುಷಿ ತಂದಿದೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಮಕ್ಕಳು ಇಲ್ಲದೆ ನನ್ನ ಸಂತೋಷ ಅಪೂರ್ಣವಾಗಿತ್ತು. ಸದ್ಯ ನನ್ನ ಜೀವನದ ಸಂತೋಷದ ದಿನಗಳು ಪ್ರಾರಂಭವಾಗಿದ್ದು ಅದಕ್ಕೆ ನನ್ನ ಮಕ್ಕಳಿಬ್ಬರು ಬಂದಿದ್ದು  ಸಂತೋಷವನ್ನು ಹಿಮ್ಮಡಿಗೊಳಿಸಿದೆ. ಇದೇ ವೇಳೆ ನನಗೆ ಶುಭಾಶಯ ತಿಳಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಅವರು 2014ರಲ್ಲಿ ದೂರವಾಗಿದ್ದರು. ನಂತರ ಆಕೆ ಪುಣೆಗೆ ಶಿಫ್ಟ್ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ರೇಣು ದೇಸಾಯಿ ಪವನ್ ಕಲ್ಯಾಣ್ ಅಭಿನಯದ 2000ದಲ್ಲಿ ತೆರೆ ಕಂಡಿದ್ದ ಬ್ಲಾಕ್ ಬಸ್ಟರ್ ಚಿತ್ರ ಬದ್ರಿಯಲ್ಲಿ ನಟಿಸಿದ್ದರು. ನಂತರ 2003ರಲ್ಲಿ ಈ ಜೋಡಿ ಜಾನಿ ಚಿತ್ರದಲ್ಲಿ ಒಂದಾಗಿತ್ತು. ನಂತರ ಪವನ್ ಕಲ್ಯಾಣ್ ಅಭಿನಯದ ಗುಡುಂಬಾ ಶಂಕರ್ ಮತ್ತು ಬಾಲು ಎಬಿಸಿಡಿಇಎಫ್ಜಿ ಚಿತ್ರಕ್ಕೆ ವಸ್ತ್ರ ವಿನ್ಯಾಸಗಾರ್ತಿಯಾಗಿ ಕೆಲಸ ಮಾಡಿದ್ದರು.
ರೇಣು ದೇಸಾಯಿ ಅವರಿಗೆ ವಿಚ್ಛೇದನ ನೀಡಿದ ನಂತರ ಪವನ್ ಕಲ್ಯಾಣ್ 2013ರಲ್ಲಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ