ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಪೆರುವಿಗೆ 2-0 ಗೋಲುಗಳ ಜಯ

ಫಿಶ್ಟ್ ಸ್ಟೇಡಿಯಂ (ರಷ್ಯಾ): ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಸಿ ಗುಂಪಿನ  ಪಂದ್ಯದಲ್ಲಿ  ಪೆರು 2-0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ದಾಖಲಿಸಿದೆ.
ಆಂಡ್ರೆ ಕ್ಯಾರಿಲ್ಲೊ (18ನೇ ನಿಮಿಷ) ಮತ್ತು ಪೆರು ತಂಡದ ನಾಯಕ ಪಾವೊಲೊ ಗೆರೆರೊ (50ನೇ ನಿಮಿಷ) ಅವರುಗಳು ಪೆರು ತಂಡದ ಪರವಾಗಿ ಗೋಲು ದಾಖಲಿಸಿದ್ದಾರೆ.
ಇನ್ನು ಮೈಲ್ ಜೆಡಿನಾಕ್ ನಾಯಕತ್ವದ ಆಸ್ಟ್ರೇಲಿಯಾ ಪಡೆ ಪ್ಂದ್ಯದುದ್ದಕ್ಕೂ ಸಾಕಷ್ಟು ಉತ್ತಮ ಪ್ರಯತ್ನ ತೋರಿದರೂ ಒಂದು ಗೋಲನ್ನು ಗಳಿಸುವುದೂ ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾದ ಮಾರ್ಕ್ ಮಿಲ್ಲಿಗನ್ ಪಂದ್ಯದ 88ನೇ ನಿಮಿಷದಲ್ಲಿ ಹಳದಿ ಕಾರ್ಡ್ ಪ್ರದರ್ಶಿಸಲಾಗಿದ್ದು ಸಹ ತಂಡದ ಹಿನ್ನಡೆಗೆ ಕಾರಣವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ