ಮಿ. ಚೀಟರ್ ರಾಮಚಾರಿ ಜೂ 22 ರಂದು ಬಿಡುಗಡೆ

ಹುಬ್ಬಳ್ಳಿ :ಜೂ-18: ಇದೇ ಜೂ 22 ರಂದು ಮಿ. ಚೀಟರ್ ರಾಮಾಚಾರಿ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ನಟ ರಾಮಾಚಾರಿ ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದ ರಾಯಚೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿ ನಟರು ಹಾಗೂ ಟೆಕ್ನಿಷನ್ ಎಲ್ಲರೂ ಉತ್ತರ ಕರ್ನಾಟಕದ ಪ್ರತಿಭೆಗಳೆ ಆಗಿದ್ದಾರೆ ಎಂದರು.

ಈ ಚಿತ್ರದಲ್ಲಿ ದಿನ ನಿತ್ಯ ನಡೆಯುವ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಆದ್ರೆ ಚಿತ್ರದ ವಿಶೇಷವೆಂದ್ರೆ ಈ ಚಿತ್ರದಲ್ಲಿ ಯಾವುದೇ ಐಟಂ ಸಾಂಗ್ ಹಾಗೂ ನಾಯಕಿ ಇಲ್ಲದಿರುವದು ವಿಶೇಷ.

ತಾಯಿಯ ಸೆಂಟಿಮೆಂಟ್ ಹಾಗೂ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟಕೊಂಡು ಕಥೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಇದೇವೇಳೆ ಚಿತ್ರದ ನಿರ್ಮಾಪಕಿ ಪ್ರವೀಣಾ ರವೀಂದ್ರ ಕುಲಕರ್ಣಿ ಮಾತನಾಡಿ, ಮೊದಲ ಚಿತ್ರರಂಗವೆಂದ್ರೆ ಬೆಂಗಳೂರಿಗೆ ಶೀಮಿತವಾಗಿತ್ತು. ಆದ್ರೆ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಈ ಚಿತ್ರದಲ್ಲಿ ಉತ್ತರ ಕರ್ನಾಟಕದವರಿಗೆ ಆದ್ಯತೆ ನೀಡುವದರ ಜೊತೆಗೆ ಸಂಪೂರ್ಣವಾಗಿ ರಾಯಚೂರು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಎಲ್ಲ ವರ್ಗದವರು ಬಂದು ಚಿತ್ರ ವೀಕ್ಷಣ ಮಾಡಬೇಕು ಎಂದು ಮನವಿ ಮಾಡಿದರು.

kannada movie,Mr.cheater Ramachari

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ