ಶಾಸಕ ಕಾಗೇರಿ ಮಗಳಿಗೆ ರ್ಯಾಂಕ್

ಶಿರಸಿ :

ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪ್ರಧಾನ ಸಮಾರಂಭ ನಡೆಯಿತು. ಕು.ಜಯಲಕ್ಷ್ಮೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವಳು ವಿಶ್ವವಿದ್ಯಾಲಯಕ್ಕೆ 3 ನೇ ರಾಂಕ್ ಪಡೆದು ಸಾಧನೆ ಮಾಡಿರುತ್ತಾಳೆ.

ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯ ಹೈಕೋಟ ನ್ಯಾಯಾಧೀಶರಾದ ಕೆ ಎನ್ ಫಣೀಂದ್ರರವರು,ಜಿಲ್ಲಾ ನ್ಯಾಯಾಧೀಶರಾದ ಸುರೇಶ ವಂಟಿಗೋಡಿಯವರು ರಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ  ಕೆ ಎಸ ಸುರೇಶ ಹಾಗೂ ಕಾಲೇಜಿನ ಸಿಬ್ಬಂದಿಗಳು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ