ಭೀಮಾತೀರದ ಹಂತಕನ ಹತ್ಯೆ: ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಬಂಧನ; ನ್ಯಾಯಾಂಗ ಬಂಧನಕ್ಕೆ

ವಿಜಯಪುರ:ಜೂ-೧೭: ಭೀಮಾತೀರದ ಹಂತಕ ಗಂಗಾಧರನ ನಿಗೂಢ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಐಡಿ ಮತ್ತು ಸ್ಥಳೀಯ ಅಧಿಕಾರಿಗಳು ಗೋಪಾಲ ಹಳ್ಳೂರರನ್ನು ವಿಜಯಪುರ ಜಿಲ್ಲೆಯ ಇಂಡಿ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್‌ ಜೂನ್‌ 28ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ಕೋರ್ಟ್​ ಆದೇಶದ ಪ್ರಕಾರ ಹಳ್ಳೂರರನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇವರೊಂದಿಗೆ ಪೇದೆಗಳಾದ ಜಾದವ್, ನಾಯಕ್​​ವಾಡಿ ಮತ್ತು ರೂಗಿ ಎಂಬವರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Bhima teerada Hantaka, Gangadhar Murder Case,Chadchan PSI Gopala Hallura, Judicial Custody

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ