`ಅಭಯಹಸ್ತ’ ಚಿತ್ರದ ಚಿತ್ರೀಕರಣ ಪೂರ್ಣ

ರಾಜೇಂದ್ರಸೂರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಪಿ.ಸತೀಶ್ಕುಮಾರ್ ಮೆಹ್ತ ಹಾಗೂ ನವೀನ್ ಪಿ.ಬಿ ಅವರು ನಿರ್ಮಿಸುತ್ತಿರುವ `ಅಭಯಹಸ್ತ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ನಟ ಅನಿರುದ್ಧ ವಾಹಿನಿಯೊಂದರ ನಿರೂಪಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಮೀಸೆ ಆಂಜನಪ್ಪ ಅವರು ಆಡಳಿತ ಪಕ್ಷದ ನಾಯಕನ ಪಾತ್ರದಲ್ಲಿ ಹಾಗೂ ನಾಗರಾಜಮೂರ್ತಿ ಅವರು ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಿನ ರಾಜಕೀಯದ ಬಗ್ಗೆ ಇವರಿಬ್ಬರ ನಡುವೆ ನಿರೂಪಕ ಚರ್ಚಿಸುವ ಸನ್ನಿವೇಶವನ್ನು ತ್ಯಾಗರಾಜನಗರದಲ್ಲಿ ಚಿತ್ರಿಸಿಕೊಳ್ಳುವುದರ ಮೂಲಕ ನಿರ್ದೇಶಕ ಪಿ.ಬಿ.ನವೀನ್ ಚಿತ್ರೀಕರಣ ಪೂರ್ಣಗೊಳ್ಳಿಸಿದ್ದಾರೆ. ಅನಿರುದ್ಧ, ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಪೂಜಾ, ಖುಷಿ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ನಿರ್ದೇಶಕ ನವೀನ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣ, ಸಂಕಲನದೊಂದಿಗೆ ಕಲಾ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಹಾಗೂ ಪ್ರವೀಣ್ ಸಂಗೀತ ನೀಡಿದ್ದಾರೆ. ಪದ್ಮಶ್ರೀ ಡಾ||ದೊಡ್ದರಂಗೇಗೌಡ, ಶಿವು, ನವೀನ್ ಅವರು ಬರೆದಿರುವ ಈ ಚಿತ್ರದ ಹಾಡುಗಳನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ನವೀನ್ ಕೃಷ್ಣ ಹಾಗೂ ಮನೋಜವಂ ಹಾಡಿದ್ದಾರೆ.

ಜಿ.ಕೆ.ಗೋವಿಂದರಾವ್, ಸಾಹಿತಿ ಚಂಪ, ಪದ್ಮಶ್ರೀ ಡಾ||ದೊಡ್ಡರಂಗೇಗೌಡ, ಹುಲಿಕಲ್ ನಟರಾಜ್, ಮಹೇಂದರ್ ಮನೋತ್, ಜೇಡ್ರಳ್ಳಿ ಕೃಷ್ಣಪ್ಪ, ಕಪಾಲಿ ಆನಂದ್ ಹಾಗೂ ವಾಟಾಳ್ ನಾಗರಾಜ್ ಅವರು ಅಭಿನಯಿಸಿರುವ ಈ ಚಿತ್ರದ ನಾಯಕರಾಗಿ `ಪಾರು ಐ ಲವ್ ಯು` ಖ್ಯಾತಿಯ ರಂಜನ್ ನಟಿಸಿದ್ದಾರೆ. ಅನಿರುದ್ಧ. ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಮಂಜು, ಮಂಡ್ಯ ಶ್ರೀಧರ್, ಸರು, ಖುಷಿ ಗೌಡ, ಪೂಜಾ, ಐಶ್ವರ್ಯ, ಫಕಿರಪ್ಪ ದೊಡ್ದಮನಿ(ಹಳ್ಳಿಮೆಷ್ಟ್ರು ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ