ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ಶಹ್ಲಾ ರಷೀದ್ ಮತ್ತೊಂದು ಟ್ವೀಟ್: ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರೂ ಏಕೆ ಎಚ್ಚರ ವಹಿಸಿಲ್ಲ ಎಂದು ತಿರುಗೇಟು

ನವದೆಹಲಿ:ಜೂ-೧೧: ತಮ್ಮ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಿಡಿಕಾರಿರುವ ಶೆಹ್ಲಾ ರಷೀದ್, ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರು ಎಚ್ಚರವಹಿಸಲಿಲ್ಲ. ಈ ಬಗ್ಗೆ ಉತ್ತರಿಸಿ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾನೂನು ಕ್ರಮದ ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಶ್ವದ ದೊಡ್ಡ ಪಕ್ಷದ ನಾಯಕರಾಗಿರುವವರು​ ವ್ಯಂಗ್ಯಭರಿತ ಮಾತಿನ ಬಗ್ಗೆ ಕಾರ್ಯಪ್ರವೃತ್ತರಾಗುತ್ತಾರೆ. ಆದರೆ, ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರು ಎಚ್ಚರವಹಿಸಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Shehla Rashid, Twitter,Nitin Gadkari

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ