ಬ್ಯಾಂಕ್ ಗೆ ಬಹುಕೋಟಿ ವಂಚನೆ ಎಸಗಿರುವ ಉದ್ಯಮಿ ನೋರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯದಲ್ಲಿದ್ದಾರೆ: ಫೈನಾನ್ಷಿಯಲ್ ಟೈಮ್ಸ್ ವರದಿ

ನವದೆಹಲಿ:ಜು-೧೧; ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ನೀರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯದಲ್ಲಿ ಇದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಇದರ ಹಿಂದೆ ಭಾರತೀಯ ಮತ್ತು ಇಂಗ್ಲೆಂಡಿನ ಅಧಿಕಾರಿಗಳ ಕೈವಾಡವಿದೆ ಎಂದು ಪತ್ರಿಕೆ ವರದಿ ತಿಳಿಸಿದೆ.

ಆದರೆ ವೈಯಕ್ತಿಕ ಕೇಸುಗಳಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಒದಗಿಸುವುದಿಲ್ಲ ಎಂದು ಬ್ರಿಟನ್ ನ ಗೃಹ ಕಚೇರಿ ತಿಳಿಸಿದೆ. ಆದರೆ ಹೇಳಿಕೆ ಪಡೆಯಲು ನೀರವ್ ಮೋದಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಭಾರತದ ಎರಡನೇ ಅತಿ ದೊಡ್ಡ ಸಾರ್ವಜನಿಕ ಉದ್ಯಮ ಬ್ಯಾಂಕು ಪಂಜಾಬ್ ನ್ಯಾಷನಲ್ ಬ್ಯಾಂಕು ಈ ವರ್ಷದ ಆರಂಭದಲ್ಲಿ ಇಬ್ಬರು ಖ್ಯಾತ ಉದ್ಯಮಿಗಳಾದ ನೀರವ್ ಮೋದಿ ಮತ್ತು ಅವರ ಮಾವ ಮೆಹುಲ್ ಚೋಕ್ಸಿ ಬೇರೆ ಭಾರತೀಯ ಬ್ಯಾಂಕುಗಳ ಸಾಗರೋತ್ತರ ಶಾಖೆಗಳ ಮೂಲಕ ಸುಮಾರು 2.2 ಶತಕೋಟಿ ಸಾಲವನ್ನು ಅಕ್ರಮವಾಗಿ ಪಡೆದಿದ್ದರು ಎಂಬ ಸ್ಫೋಟಕ ಮಾಹಿತಿ ಇಡೀ ಭಾರತೀಯ ಬ್ಯಾಂಕು ಉದ್ಯಮ ರಂಗವನ್ನು ತಲ್ಲಣಗೊಳಿಸಿತ್ತು.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ನೀರವ್ ಮೋದಿ ಲಂಡನ್ ಗೆ ಪಲಾಯನ ಮಾಡಿದ್ದು ಅಲ್ಲಿ ರಾಜಕೀಯ ಮುಖಂಡರ ಪ್ರಭಾವದಡಿಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಫೈನಾನ್ಷಿಯಲ್ ಟೈಮ್ಸ್ ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನೀರವ್ ಮೋದಿಗೆ ಗಡೀಪಾರು ಆದೇಶ ತರುವ ಮುನ್ನ ದೇಶದ ಜಾರಿ ನಿರ್ದೇಶನಾಲಯ ಸಂಸ್ಥೆಗಳು ತಮ್ಮನ್ನು ಸಂಪರ್ಕಿಸುವುದಕ್ಕೆ ಕಾಯುತ್ತಿದ್ದೇವೆ ಎಂದಿದ್ದಾರೆ. ಆದರೆ ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರತಿಕ್ರಿಯೆ ನೀಡಿಲ್ಲ. ಭಾರತ ಈಗಾಗಲೇ ಮತ್ತೊಬ್ಬ ಉದ್ಯಮಿ ವಿಜಯ್ ಮಲ್ಯರನ್ನು ಗಡೀಪಾರು ಮಾಡಲು ಸಿದ್ದತೆ ನಡೆಸಿದೆ.

Nirav Modi, PNB,Political Asylum In UK

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ