ಟ್ವಿಟರ್‌ನಲ್ಲಿ ಸುದ್ದಿ: ವಿರಾಟ್ ಗಡ್ಡಕ್ಕೂ ವಿಮೆ?

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಗಡ್ಡಕ್ಕೂ ವಿಮೆ ಮಾಡಿಸಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿದೆ.
ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಅವರು ಟ್ವಿಟರ್‌ ಮೂಲಕ ಈ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ.
ಅವರು ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ವಿಮೆ ಕಂಪೆನಿಯವರು ಎಂದು ಹೇಳಲಾಗುವ ಇಬ್ಬರು ಕೊಹ್ಲಿ ಅವರ ಗಡ್ಡದ ಚಿತ್ರ ತೆಗೆಯುತ್ತಿದ್ದಾರೆ. ನಂತರ ಕೊಹ್ಲಿ ದಾಖಲೆಗಳಿಗೆ ಸಹಿ ಮಾಡುತ್ತಾರೆ.
‘ನೀವು ಗಡ್ಡದ ಬಗ್ಗೆ ತುಂಬ ಕಾಳಜಿ ಹೊಂದಿದ್ದೀರಿ ಎಂದು ನನಗೆ ಗೊತ್ತು. ಆದರೆ ಈಗ ವಿಷಯವೇನೆಂದರೆ, ನೀವು ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದೀರಿ ಎಂದೆನಿಸುತ್ತದೆ’ ಎಂದು ರಾಹುಲ್‌ ವಿಡಿಯೊಗೆ ಟಿಪ್ಪಣಿ ಬರೆದಿದ್ದಾರೆ.
ಭಾರತ ತಂಡದ ಆಟಗಾರ ರವೀಂದ್ರ ಜಡೇಜ ಅವರು ಈ ಹಿಂದೆ ಗಡ್ಡ ಬೋಳಿಸುವಂತೆ ಕೊಹ್ಲಿ ಅವರಿಗೆ ಸವಾಲು ಹಾಕಿದ್ದರು. ಆದರೆ ಗಡ್ಡ ಬೋಳಿಸಲು ವಿರಾಟ್ ಹಿಂದೇಟು ಹಾಕಿದ್ದರು. ಇದು ರಾಹುಲ್ ಅವರ ಪೋಸ್ಟ್‌ಗೆ ಪುಷ್ಠಿ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ