ಸಾಲ ಮನ್ನಾಕ್ಕೆ ಶಾಸಕ ಕಾಗೇರಿ ಮನವಿ

 

ಶಿರಸಿ :

ಉತ್ತರಕನ್ನಡದಲ್ಲಿ ಮಾತ್ರ ಪ್ರಚಲಿತವಿರುವ ಕೃಷಿ ಉದ್ದೇಶದ ಬಗ್ಗೆ ಸಹಕಾರಿ ಸಂಸ್ಥೆಗಳು ಕೃಷಿಕರಿಗೆ ಪೂರೈಸುತ್ತಿರುವ ಆಸಾಮಿ ಸಾಲ/ಬಳಕೆ ಸಾಲ/ಕೃಷಿ ಅಲ್ಪಾವಧಿ ಸಾಲ ಮತ್ತು ಅಲ್ಪಾವಧಿ ಕೃಷಿ ಅಭಿವೃದ್ಧಿ ಸಾಲವನ್ನು ಕೃಷಿ ಸಾಲ ಎಂದು ಪರಿಗಣಿಸಲು ಹಾಗೂ ಈ ಸಾಲವನ್ನು ಕೂಡ ಮನ್ನಾ ಮಾಡುವ ಕುರಿತು ಸಚಿವ ಸಂಪುಟದಲ್ಲಿ ಚಚರ್ಿಸಿ ಅನುಮೋದಿಸಬೇಕು ಎಂದು ಶಿರಸಿ-ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಮುಖ್ಯವಾಗಿ ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತಮ್ಮ ರೈತ ಸದಸ್ಯರಿಗೆ ಬೆಳೆ ಸಾಲದ ಹೊರತಾಗಿ ಕೃಷಿ ಅಭಿವೃದ್ಧಿ ಬಗ್ಗೆ ಮತ್ತು ದೈನಂದಿನ ಕೃಷಿ ಹಾಗೂ ಕೃಷಿ ಉಪಚಟುವಟಿಕೆಗಳಿಗೆ ಕೃಷಿ ಅಭಿವೃದ್ಧಿ ಸಾಲ, ಆಸಾಮಿ ಸಾಲ, ಬಳಕೆ ಸಾಲ/ಅಲ್ಪಾವಧಿ ಸಾಲ ಇತ್ಯಾದಿ ಶಿರೋನಾಮೆಯಡಿ ಕೃಷಿ ಸಾಲ ಪೂರೈಸುತ್ತಲಿವೆ. ಈ ಕೃಷಿ ಸಾಲವನ್ನು ಜಿಲ್ಲೆಯ ಹಲವು ಮಾರಾಟ ಸಹಕಾರಿ ಸಂಘಗಳು ಸಹ ನೇರವಾಗಿ ಸದಸ್ಯರಿಗೆ ಈ ಸಾಲವನ್ನು ಒದಗಿಸುತ್ತಲಿವೆ.

ಅಲ್ಲದೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಕ್ಯಾಶ್ ಕ್ರೆಡಿಟ್ ಪದ್ಧತಿಯಲ್ಲಿ ನೀಡಲಾಗುತ್ತಿರುವ ಈ ಆಸಾಮಿ ಸಾಲ/ಬಳಕೆ ಸಾಲ/ಅಲ್ಪಾವಧಿ ಕೃಷಿ ಅಭಿವೃದ್ಧಿ ಸಾಲವನ್ನು ಈ ಹಿಂದೆ ರಿಝರ್ವ ಬ್ಯಾಂಕ್ ಸೂಚಿಸಿದ ಸಂಪೂರ್ಣ ಸಾಲದ ಯೋಜನೆಯಡಿಯಲ್ಲಿ ನಿಯಮಗಳ ಪರಿಮಿತಿಯಲ್ಲಿ ನೀಡಲಾಗುತ್ತಿದೆ. ನಬಾರ್ಡ ಸಹ ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಬೆಳೆ ಸಾಲದ ಹೊರತಾಗಿ ಕೃಷಿಗೆ ಪೂರಕವಾದ ಕೃಷಿ ಚಟುವಟಿಕೆಗಳ ಬಗ್ಗೆ ಕ್ಯಾಶ್ ಕ್ರೆಡಿಟ್ ರೂಪದಲ್ಲಿ ಸಾಲ ನೀಡಬಹುದಾಗಿದೆ ಎಂದು ತಿಳಿಸಿರುತ್ತದೆ.

ಉತ್ತರ ಕನ್ನಡ ಜಿಲ್ಲಾ ಪರಿಷತ್, ಕಾರವಾರ ಇವರು 2006-07ನೇ ಸಾಲಿನಲ್ಲಿಯೇ ಕೃಷಿ ಉದ್ದೇಶದ ಬಗ್ಗೆ ಕೃಷಿಕರು ಜಿಲ್ಲೆಯ ಸಹಕಾರಿ ಸಂಸ್ಥೆಗಳಿಂದ ಪಡೆಯುತ್ತಿರುವ ಈ ಆಸಾಮಿ ಸಾಲ/ ಬಳಕೆ ಸಾಲ / ಅಲ್ಪಾವಧಿ ಕೃಷಿ ಅಭಿವೃದ್ಧಿ ಸಾಲಗಳನ್ನು ಕೃಷಿ ಉದ್ದೇಶದ ಸಾಲ ಎಂದು ಪರಿಗಣಿಸಿ ಬಡ್ಡಿ ರಿಯಾಯಿತಿಯ ಸೌಲಭ್ಯ ಒದಗಿಸಲು ತಮ್ಮ ಮನವಿಯಲ್ಲಿ ಕೋರಿರುತ್ತಾರೆ.

ಉತ್ತರ ಕನ್ನಡ ಜಿಲ್ಲಾ ಮಧ್ಯವತರ್ಿ ಸಹಕಾರಿ ಬ್ಯಾಂಕ್ ಸಹ ಬ್ಯಾಂಕಿನ ಆಡಳಿತ ಮಂಡಳಿ ಸಭೆ ದಿ: 14-03-2006 ಮತ್ತು ದಿ: 28-09-2006ರ ಆಡಳಿತ ಮಂಡಳಿ ನಿರ್ಣಯದನ್ವಯ ಸಹಕಾರಿ ಸಂಘಗಳ/ಕೃಷಿ ತಜ್ಞರು ಹಾಗೂ ಕೃಷಿಕರ ಬೇಡಿಕೆ ನ್ಯಾಯ ಸಮ್ಮತವಾಗಿದೆ ಎಂಬುದನ್ನು ಮನಗಂಡು ಕೃಷಿಕರಿಗೆ ಕೃಷಿ ಉದ್ದೇಶಗಳ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ನೀಡಡುತ್ತಿರುವ ಸದರ ಆಸಾಮಿ ಸಾಲ / ಬಳಕೆ ಸಾಲ/ ಅಲ್ಪಾವಧಿ ಕೃಷಿ ಅಭಿವೃದ್ಧಿ ಸಾಲಗಳನ್ನು ಕೃಷಿ ಸಾಲ ಎಂದು ಪರಿಗಣಿಸಲು ನಿರ್ಣಯ ಅಂಗೀಕರಿಸಿ ರಾಜ್ಯ ಸಕರ್ಾರಕ್ಕೆ ಈ ಹಿಂದೆಯೇ ದಿನಾಂಕ : 17-08-2007ರಂದು ಪ್ರಸ್ತಾವನೆ ಸಲ್ಲಿಸಿದ್ದು ಇರುತ್ತದೆ.

ರಾಜ್ಯದ ರೈತರ ಕಷ್ಟ ಕಾರ್ಪಣ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ತಾವುಗಳು ಈ ಮೇಲಿನ ಎಲ್ಲ ವಿಷಯಗಳನ್ನು ಪರಿಶೀಲಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರು ತಮ್ಮ ವಿವಿಧ ಕೃಷಿ ಅಭಿವೃದ್ಧಿಗಾಗಿ ತೆಗೆದುಕೊಂಡ ಈ ಮೇಲೆ ತಿಳಿಸಿದ ಸಾಲಗಳನ್ನು ಕೃಷಿ ಸಾಲ ಎಂದು ಪರಿಗಣಿಸಿ ರೈತರಿಗೆ ಸರಕಾರದಿಂದ ಸಿಗುವ ಯಾವತ್ತೂ ರಿಯಾಯಿತಿ ಬಡ್ಡಿದರ ಹಾಗೂ ಸಾಲಮನ್ನಾ ಸೌಲಭ್ಯಗಳನ್ನು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ರೈತರಿಗೆ ಸಿಗುವಂತೆ ವಿಷಯವನ್ನು ಸಚಿವ ಸಂಪುಟದಲ್ಲಿ ಪರಿಶೀಲಿಸಿ ಸೂಕ್ತ ಸರಕಾರಿ ಆದೇಶ ಹೊರಡಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ದಿನಾಂಕ 31-03-2018ಕ್ಕೆ ಇದ್ದಂತೆ ಉತ್ತರ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಮಾರಾಟ ಸಹಕಾರಿ ಸಂಘಗಳಲ್ಲಿರುವ ಆಸಾಮಿ ಸಾಲ/ಬಳಕೆ ಸಾಲದ ವಿವರಣೆ ಈ ಕೆಳಗಿನಂತಿರುತ್ತದೆ. ಶಿರಸಿಯಲ್ಲಿ 22857.05, ಸಿದ್ದಾಪುರದಲ್ಲಿ 8007.46, ಯಲ್ಲಾಪುರದಲ್ಲಿ 12899.50, ಮುಂಡಗೋಡದಲ್ಲಿ 56.81, ಜಗಲ್ಬೇಟ್ದಲ್ಲಿ 389.19, ಅಂಕೋಲಾದಲ್ಲಿ 568.0 ಲಕ್ಷ ರೂಪಾಯಿಗಳಷ್ಟು ಸಾಲ ಇದ್ದ, ಅವುಗಳ ಕುರಿತು ಕ್ರಮ ಕೈಗೊಳ್ಳಬೇಕೆಂದು ಕಾಗೇರಿ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ