ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ

 

ಬೆಂಗಳೂರು, ಮೇ 31- ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಪೇಟಿಎಂ ಆ್ಯಪ್ ಮೂಲಕ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿದರೆ ಪ್ರತಿಬಾರಿ 100 ರೂಪಾಯಿವರೆಗೆ ಪೇಟಿಎಂನಲ್ಲಿ ಹಣ ಸಿಗಲಿದೆ.

ಪೇಟಿಎಂ ಬ್ಯಾಂಕ್ ಟ್ರಾನ್ಸ್‍ಫರ್ ಮೂಲಕ ಗ್ರಾಹಕರು ಸುಲಭವಾಗಿ ಮತ್ತು ಇನ್‍ಸ್ಟಂಟ್ ಹಣ ವರ್ಗಾವಣೆ ಮಾಡಬಹುದು. ಅದೂ ಕೂಡ ಯಾವುದೇ ಬ್ಯಾಂಕ್ ಅಕೌಂಟ್‍ನಿಂದ ಇತರೆ ಯಾವುದೇ ಬ್ಯಾಂಕ್ ಅಕೌಂಟಿಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಪೇಟಿಎಂ ವ್ಯಾಲೆಟ್‍ಗೆ ಕಳುಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಈ ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಶುಲ್ಕವೂ ಇರುವುದಿಲ್ಲ. ಪೇಟಿಎಂ ಆ್ಯಪ್ ಮೂಲಕ ಹಣ ವರ್ಗಾವಣೆಗೆ ಕೆವೈಸಿಯ ಅಗತ್ಯವೂ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ