ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಮಿಡ್ ನೈಟ್ ಐಟಿ ಶಾಕ್

ಬಾಗಲಕೋಟೆ,ಏ.8

ಮತದಾನಕ್ಕೆ ಕೇವಲ ನಾಲ್ಕು ದಿನ ಇರುವಂತೆಯೇ ಕಾಂಗ್ರೆಸ್‍ಗೆ ಮತ್ತೊಮ್ಮೆ ಐಟಿ ಶಾಕ್ ನೀಡಿದೆ.

ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕರು ಉಳಿದುಕೊಂಡಿದ್ದ ರೆಸಾರ್ಟ್ ಮೇಲೆ ರಾತ್ರೋರಾತ್ರಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಾದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದೆ. ದಾಳಿ ವೇಳೆ ಸಿಎಂ ಸಿದ್ದರಾಮಯ್ಯ ಆಪ್ತ ಸಿಎಂ ಇಬ್ರಾಹಿಂ ಕೂಡ ಇದ್ದರು. ಆದರೆ ನಸುಕಿನಜಾವ 2 ಗಂಟೆಗೆ ಸಿಎಂ ಇಬ್ರಾಹಿಂ ರೆಸಾರ್ಟ್‍ನಿಂದ ಹೊರಬಂದ್ದಿದ್ದಾರೆ.

ಬಳಿಕ ಮಾತನಾಡಿದ

ಅವರು, `ಈ ರೆಸಾರ್ಟ್‍ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ಊಟಕ್ಕೆಂದು ಈ ರೆಸಾರ್ಟ್‍ಗೆ ಬಂದಿದ್ದೆ. ನಾನು ಎಸ್.ಆರ್ ಪಾಟೀಲ್ ಇಬ್ಬರು ಊಟಕ್ಕೆಂದು ಬಂದಿದ್ವಿ ಅಷ್ಟೇ. ಐಟಿ ಅಧಿಕಾ

ರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆದರೆ ನನ್ನನ್ನು ಏನೂ ಪ್ರಶ್ನೆ ಮಾಡಲಿಲ್ಲ. ಒಳಗಡೆ ಏನ್ ಸಿಗುತ್ತೆ ಅಲ್ಲಿ. ಏನೂ ಇಲ್ಲ. ಐಟಿ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ ಎಂದು ತಿಳಿಸಿದರು.

ರೆಸಾರ್ಟ್‍ನಲ್ಲಿ ಶೋಧ ಕಾರ್ಯ

ನಡೆಸಲಾಗಿದೆ. ರೆಸಾರ್ಟ್‍ಗೆ ಸಿಆರ್‍ಪಿಎಫ್ ಹಾಗೂ ಬಾದಾಮಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಾದಾಮಿ ಕಾಂಗ್ರೆಸ್‍ನಲ್ಲಿ ತಳಮಳ ಉಂಟಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ