ಬಾದಾಮಿಯಲ್ಲಿ ಐಟಿ ದಾಳಿ: ಶಾಸಕ ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೆರಿಟೇಜ್ ರೆಸಾರ್ಟ್ ಹಾಗೂ ಮಯೂರ ಯಾತ್ರಿ ಹೋಟೆಲ್ ನಲ್ಲಿ ಲಕ್ಷಾಂತರ ರೂ ಹಣ ವಶಕ್ಕೆ ಪಡೆದ ಅಧಿಕಾರಿಗಳು

ಬಾದಾಮಿ:ಮೇ-8 ಬಾದಾಮಿಯಲ್ಲಿರುವ ಹೊಸಪೇಟೆ (ವಿಜಯನಗರ) ಶಾಸಕ ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೆರಿಟೇಜ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಹುಬ್ಬಳ್ಳಿ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಎರಡು ದಿನಗಳ ಹಿಂದೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಾ ಹೆರಿಟೇಜ್ ಕಾಂಗ್ರೆಸ್ ಮುಖಂಡರ ಕಾರ್ಯಕ್ಷೇತ್ರವಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ರಾತ್ರಿ ಐಟಿ ದಾಳಿ ನಡೆಸಲಾಗಿದೆ.

ಕೃಷ್ಣಾ ಹೆರಿಟೇಜ್ ಪಕ್ಕದಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಡೆತನದ ಹೋಟೆಲ್ ಮಯೂರ ಯಾತ್ರಿ ನಿವಾಸದಲ್ಲೂ ಪರಿಶೀಲನೆ ನಡೆಸಿದ್ದಾರೆ. ಸುಮಾರು ಒಂಭತ್ತು ಗಂಟೆಗಳ ಕಾಲ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ರೆಸಾರ್ಟ್​ನಲ್ಲಿದ್ದ ಲಕ್ಷಾಂತರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಐಟಿ ದಾಳಿ ಮುಗಿದಿದ್ದು, ಕೆಲ ಕಾಂಗ್ರೆಸ್ ಮುಖಂಡರ ಬಳಿ ಇದ್ದ ಲಕ್ಷಾಂತರ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಕೃಷ್ಣಾ ಹೆರಿಟೇಜ್‌ನಲ್ಲಿ 11 ಲಕ್ಷ ಹಾಗೂ ಮಯೂರ ಯಾತ್ರಿ ನಿವಾಸದಲ್ಲಿ 2.8 ಲಕ್ಷ ಸಿಕ್ಕಿರುವ ಮಾಹಿತಿ ದೊರೆತಿದೆ. ಆದರೆ ಅದನ್ನು ಖಚಿತಪಡಿಸದ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿ ಸ್ಥಳದಿಂದ ತೆರಳಿದ್ದಾರೆ.

karnataka assembly election,Badami,IT Raid

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ