ಮೋದಿ ದೇಶದ ಪ್ರಧಾನಿ, ಜವಾಬ್ದಾರಿಯಿಂದ ಮಾತನಾಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

ಶಿವಮೊಗ್ಗ ಬ್ರೇಕಿಂಗ್ :ಮೇ-4; ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಕ್ರೈಮ್ ರೇಟ್ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಇನ್ನು ಬಂಡವಾಳ ಹೂಡಿಕೆಯಲ್ಲಿ ನಾವೇ ನಂಬರ್ ಒನ್. ಹೀಗಿರುವಾಗ ಮೋದಿಯವರು ಓರ್ವ ಪ್ರಧಾನಿಯಾಗಿ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಿದ್ದರಾಮಯ್ಯ,ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ. ಲಾ ಅಂಡ್ ಆರ್ಡರ್ ಸರಿ ಇಲ್ಲದಿದ್ದರೆ ಯಾರು ಬಂದು ಇನ್ವೆಸ್ಟ್ ಮಾಡ್ತಾರೆ. ಎಫ್ಡಿಐ ನಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ. ಗುಜರಾತ್ ಹಿಂದಿಕ್ಕಿ ನಾವು ಮುಂದೆ ಇದ್ದೇವೆ. ಹಿಂದುಳಿದವರು, ರೈತರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಿರೋದು ಮೋದಿ ಕಾಲದಲ್ಲಿ. ಮೋದಿ ದೇಶದ ಪ್ರಧಾನಿ, ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.

ಶಿಕಾರಿಪುರದಲ್ಲಿ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಈಶ್ವರಪ್ಪ ಸೋಲಲಿದ್ದಾರೆ. ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡೂ ಕಡೆ ನಾನು ಗೆಲ್ಲಲಿದ್ದೇನೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ವ್ಯಕ್ತಿ. ಅವರ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. 23 ಕೇಸುಗಗಳು ಕೋರ್ಟಿನಲ್ಲಿವೆ. ಇವುಗಳಿಂದ ಈಚೆಗೆ ಬರೋದೆ ಕಷ್ಟ. ಪಾಪ ವಯಸ್ಸಾಗಿದೆ. ಅವರಿಗೆ ಸೈಕಲಾಜಿಕಲ್ ಡಿಪ್ರೆಸ್ ಆಗಿದೆ. ಏನೇನೋ ಬಡಬಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಕಳಂಕಿತ ವ್ಯಕ್ತಿ- ಜನ ಅವರನ್ನ ಒಪ್ಪೊಲ್ಲ ಮೋದಿ ಎಷ್ಟು ಬಾರಿ ಬಂದರೂ ರಾಜ್ಯದಲ್ಲಿ ಏನೂ ಪರಿಣಾಮ ಬೀರೊಲ್ಲ. ನುಡಿದಂತೆ ನಡೆದಿದ್ದರೆ ಜನ ನಂಬುತ್ತಿದ್ದರು. ಸುಳ್ಳು ಹೇಳಿದ್ದಾರೆ. ಧರ್ಮಗಳ ನಡುವೆ ಸಂಘರ್ಷ ಮಾಡಿಸೋದು. ಜಾತಿ-ಜಾತಿ ನಡುವೆ ಬೆಂಕಿ ಹಚ್ಚೋದು, ಹೆಣದ ಮೇಲೆ ರಾಜಕೀಯ ಮಾಡೋದು ಅವರ ಅಜೆಂಡ. ನಾನು ಸೆಕ್ಯೂಲರ್ ಮನುಷ್ಯ. ಐ ಲವ್ ಅಲ್ ಕಾಸ್ಟ್, ಐ ಲವ್ ಆಲ್ ರಿಲಿಜಿಯನ್, ಐ ಲವ್ ಆಲ್ ಪೀಪಲ್ ಬಿಜೆಪಿಯವರು ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ಗೆ ಟಿಕೆಟ್ ಕೊಟ್ಟಿದಾರಾ..? ಜನ ಕಾಂಗ್ರೆಸ್ಗೆ ಓಟ್ ಹಾಕಲು ನಿರ್ಧರಿಸಿದ್ದಾರೆ. ಈ ಕೋಮುವಾದಿ ಪಕ್ಷಕ್ಕೆ ಓಟ್ ಕೊಡಬೇಡಿ. ಸಮಾಜವನ್ನು ಒಡೆಯುತ್ತಾರೆ. ಸಾಮರಸ್ಯ ಹಾಳು ಮಾಡುತ್ತಾರೆ.

ನರೇಂದ್ರ ಮೋದಿ ಟೋಟಲಿ ಫೇಲ್ಡ್. ಇನ್ನು ಜೆಡಿಎಸ್ ಅವಕಾಶವಾದಿ ಪಕ್ಷ. ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ಪಕ್ಷ ಎಂದು ಗುಡುಗಿದ್ದಾರೆ.

Karnataka assembly election,CM Siddaramaiah,Shivamogga

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ