ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮನೆ ಮೇಲೆ ಐಟಿ ದಾಳಿ: ಗೃಹಬಂಧನದಲ್ಲಿಟ್ಟು ಅಧಿಕಾರಿಗಳು ಮಾನಸಿಕ ಹಿಂಸೆ ನೀಡಿದ್ದಾರೆ; ಚುನಾವಣಾ ಆಯೋಗಕ್ಕೆ ದೂರುನೀಡುವುದಾಗಿ ಕಿಡಿ

ಶಿರಸಿ:ಮೇ-3: ನನ್ನ ಮನೆಯ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯ ತನಕ ಗೃಹಬಂಧನದಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲು ಪಕ್ಷದ ಹಿರಿಯರೊಂದಿಗೆ ಚರ್ಚಿಸಿದ್ದೇನೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟು ವರ್ಷ ಕಾಣದ ಭೀಮಣ್ಣ ಐಟಿ ಅಧಿಕಾರಿಗಳಿಗೆ ಈಗ ಕಂಡಿದ್ದು ಹೇಗೆ? ಎಲ್ಲೆಡೆ ಕಾಂಗ್ರೆಸ್ ಬಗ್ಗೆ ವ್ಯಕ್ತವಾಗುತ್ತಿರುವ ಒಳ್ಳೆಯ ಅಭಿಪ್ರಾಯ ಕಂಡು ಈ ರೀತಿಯ ಷಡ್ಯಂತ್ರ ಮಾಡಲಾಗಿದೆ. ನನ್ನ ಬಳಿ ಯಾವುದೇ ಅನಧಿಕೃತ ಹಣ ಸಿಕ್ಕಿಲ್ಲ. ನಾನು ನಿರಂತರವಾಗಿ ಸರ್ಕಾರಕ್ಕೆ ಆದಾಯ ತೆರಿಗೆ ಹಣ ಪಾವತಿಸುತ್ತಿದ್ದೇನೆ ಎಂದರು.

ಶಿರಸಿಯಲ್ಲಿನ ಅಯ್ಯಪ್ಪನಗರದಲ್ಲಿರುವ ಭೀಮಣ್ಣ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 5 ಮಂದಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದರು.

sirsi-siddapura,bhimanna nayak,IT Raid

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ