ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ

ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ
ಬೀದರ್, ಮೇ 3-ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಬುಧವಾರ ಹಾಗೂ ಗುರುವಾರ ಎಲ್ಲ ಸಮುದಾಯದ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.

ಲಿಂಗದಳ್ಳಿ, ಮಾಶಾಳ ತಾಂಡಾ ಸೇರಿದಂತೆ ವಿವಿಧೆಡೆ ತೆರಳಿ ಮನೆ, ಮನೆಗೆ ಭೇಟಿ ನೀಡಿದ ಕಲ್ಲೂರ್, ಮತದಾರರೊಂದಿಗೆ ಮನದಾಳದ ಮಾತುಗಳನ್ನಾಡಿ ಈ ಬಾರಿ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಬಣ್ಣದ ಮಾತುಗಳಿಗೆ ಯಾರೂ ಕಿವಿಗೊಡಬಾರದು. ರಾಜ್ಯದ ರೈತರ ಮತ್ತು ಜನ ಸಾಮಾನ್ಯರ ಹಿತ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸುಭಾಷ ಕಲ್ಲೂರ್ ಹೇಳಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ವಿಜನ್ ಹೊಂದಿz್ದÉೀನೆ. ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಒಡೆದಾಳುವ ನೀತಿ ಅನುಸರಿಸುವ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.
ಜಿಪಂ ಸದಸ್ಯ ಗುಂಡುರೆಡ್ಡಿ ಸೇರಿದಂತೆ ಹಲವರು ಇದ್ದರು.

ಪ್ರಮುಖರಾದ ಶಿವಾನಂದ ಮಂಠಾಳಕರ್, ಗುಂಡುರೆಡ್ಡಿ, ಬ್ಯಾಂಕರೆಡ್ಡಿ, ಸೋಮನಾಥ ಪಾಟೀಲ್, ಬಸವರಾಜ ಆರ್ಯ, ಮಲ್ಲಿಕಾರ್ಜುನ, ಓಂಕಾರ ತುಂಬಾ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ