ಹೋಂ ಮಿನಿಸ್ಟರ್ ಆಗಿ ಬರುತ್ತಿದ್ದಾರೆ ರಿಯಲ್ ಸ್ಟಾರ್!

ಬೆಂಗಳೂರು: ರಾಜಕೀಯ ಪಕ್ಷ ಘೋಷಿಸಿ ರಾಜಕೀಯಕ್ಕೆ ಇಳಿಯುವ ಮುನ್ಸೂಚನೆ ನೀಡಿ ದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗಹೋಮ್ ಮಿನಿಸ್ಟರ್ ಮೂಲಕ ಚಿತ್ರ ಜಗತ್ತಿಗೆ ಮರಳಿದ್ದಾರೆ.

ತೆಲುಗು ಹಾಗೂ ಕ್ನನಡ ಎರಡು ಭಾಷೆಯಲ್ಲೂ ತಯಾರಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಮಲೇಷಿಯಾದಲ್ಲಿ ನಡೆಯುತ್ತಿದೆ.
ವೇದಿಕಾ ಕುಮಾರಂದ, ಲಾಸ್ಯಾ ನಾಗರಾಜ್ ಸೇರಿ ಬಹುತಾರಾಗಣವಿದೆ. ಈ ಚಿತ್ರದ ಮೂರು ಹಾಡುಗಳು ಹಾಗೂ ಕೆಲವೇ ದೃಶ್ಯಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.

ಸುಜಯ್ ಕೆಶ್ರೀ ಹರಿ ಅವರ ನಿರ್ದೇಶನವಿದೆ. ಮಲೇಷಿಯಾದ ಶಾಪಿಂಗ್ ಮಾಲ್, ಅದ್ಧೂರಿ ಬಹುಮಹಡಿ ಕಟ್ಟಡಗಳ ಮುಂದೆ ನಡೆಯುತ್ತಿದ್ದು ಮಲೇಷಯಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ