ಬಿಜೆಪಿ ಅಭ್ಯರ್ಥಿ ಪ್ರಭು ಚಹ್ವಾಣ್ ಔರಾದ್ ಪಟ್ಟಣದಲ್ಲಿ ಪಾದಯಾತ್ರೆ

ಪ್ರಭು ಪಾದಯಾತ್ರೆ
ಬೀದರ್, ಮೇ 2- ಬಿಜೆಪಿ ಅಭ್ಯರ್ಥಿ ಪ್ರಭು ಚಹ್ವಾಣ್ ಔರಾದ್ ಪಟ್ಟಣದಲ್ಲಿ ಬುಧವಾರ ಪಾದಯಾತ್ರೆ ಮ‌ೂಲಕ ಭರ್ಜರಿ ಮತಯಾಚನೆ ಮಾಡಿದರು.

ಮುಖಂಡರು, ಕಾರ್ಯಕರ್ತರೊಂದಿಗೆ ಪ್ರತಿ ಮನೆ, ಮನೆಗೆ ಹೋಗಿ ಮತಯಾಚನೆ ಮಾಡಿದ ಪ್ರಭು ಚಹ್ವಾಣ್, ಈ ಬಾರಿ ಬಿಜೆಪಿ ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.

ಪ್ರಭು ಚಹ್ವಾಣ್ ವಿವಿಧ ಬಡಾವಣೆ ಗಳಿಗೆ ತೆರಳಿದ ವೇಳೆ ಸ್ಥಳೀಯರು ಆರತಿ ಮಾಡಿ ಬರಮಾಡಿಕೊಂಡು ನಿಮ್ಮ ಜೊತೆ ನಾವಿದ್ದೆವೆ ಎಂಬ ಸಂದೇಶ ನೀಡಿದರು.

ಪ್ರಮುಖರಾದ ಅನೀಲ ಗುಂಡಪ್ಪ, ವಸಂತ ಬಿರಾದಾರ, ಸತೀಶ್ ಪಾಟೀಲ್, ರಮೇಶ ದೇವಕತ್ತೆ, ಸಚಿನ್ ರಾಠೋಡ್, ಶೇಷರಾವ ಕೋಳಿ, ಸಂಜುಕುಮಾರ, ಜಗನ್ನಾಥ, ಮಧುಕರ, ಕೊಂಡಿಬಾ ಬಿರಾದಾರ ಇತರರಿದ್ದರು.
==========================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ