ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ

ರಾಮನಗರ:ಏ-೩೦: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್, ಕುಮಾರಸ್ವಾಮಿ ಹಣ ಕೊಟ್ಟು ಜನರನ್ನು ಸೇರಿಸ್ತಾನೆ. 22 ಲಕ್ಷ ಹಣ ಹಂಚಿಕೆ ಮಾಡಿ ಜನಸೇರಿಸಿದ್ದಾನೆ. ಆತನ ಮೇಲಿನ ಅಭಿಮಾನಕ್ಕಾಗಿ ಜನ ಸೇರಿಲ್ಲ ಎಂದು ಕಿಡಿಕಾರಿದ್ದಾರೆ.

ರಾಮನಗರದಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಪರ ಪ್ರಚಾರ ಕೈಗೊಂಡಿರುವ ಜಮೀರ್,ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವ್ನು ಯಾರು?ನಾನು ಚನ್ನಪಟ್ಟಣ ರಾಮನಗರ ಚನ್ನಪಟ್ಟಣಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು? ೨೨ ಲಕ್ಷ ಹಣ ಹಂಚಿ ಕುಮಾರಸ್ವಾಮಿ‌ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ.ನಾನು ಬಂದಾಗ ತಡರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ರು. ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ, ಹಣ‌ಕೊಟ್ಟು ಸೇರಿಸಿದ್ದು ಎಂದು ವಾಗ್ದಾಳಿ ನಡೆಸಿದರು.

ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ ೫೨ ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ನೋಡಿ ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ. ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವ್ನು ಯಾರು? ಈಗ ಮುಸ್ಲಿಂರನ್ನ ಜರಿದು ಈಗ ನಾನು ಮಾತನಾಡಿಲ್ಲ ಅಂತಾರೆ. ಅವ್ರದು ಹಿಟ್ ಅಂಡ್ ರನ್ ಕೇಸ್ಯಾವುದನ್ನ ಅವ್ರು ಹೇಳಿ ಒಪ್ಪಿಕೊಂಡಿದ್ದಾನೆ. ಹೇಳೋದನ್ನ ಹೇಳಿ ನಂತ್ರ ನಾನು ಹೇಳೇ ಇಲ್ಲ ಅಂತಾರೆ. ಈಗ ಅಮಿತ್ ಶಾಬೇಟಿ ವಿಚಾರ ಕೇಳಿದ್ರೆ ಯಾಕೆ ಕುಮಾರಸ್ವಾಮಿ ಬ್ಯಾ ಬ್ಯಾ ಅಂತಿಲ್ವಾ.ಹೇಳಿದ್ದನ್ನ ಅವ್ರು ಅವ್ರ ಜಮಾನ್ದಲ್ಲಿ ಸಮರ್ಥನೆ ಮಾಡಿಕೊಂಡಿಲ್ಲ ಎಂದು ಜಮೀರ್ ವಾಕ್ ಪ್ರಹಾರ ನಡೆಸಿದರು.

Karnataka assembly election,Congress,JDS,Zmeer ahmad,H D Kumaraswami

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ