ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ: ಸಿಎಂ ಗೆ ಹೆಚ್ ಡಿಕೆ ಸವಾಲ್

ಸಕಲೇಶಪುರ:ಏ-30: ಬಿಜೆಪಿ ಜೊತೆ ಒಪ್ಪಂದದ ಪ್ರಶ್ನೆಯೇ ಇಲ್ಲ…ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ…ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ರಾಜ್ಯಾ ಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಸಕಲೇಶಪುರದಲ್ಲಿ ಮಾತನಾಡಿದ ಅವರು, ನಾನು ಯಾರನ್ನೂ ಭೇಟಿಯಾಗಿಲ್ಲ…ಭೇಟಿಯಾಗಿಲ್ಲ ಎಂದ ಮೇಲೆ ಆ ಪ್ರಶ್ನೆಯೇ ಉದ್ಭವಿಸಲ್ಲ…ಯಾರೋ ಕೆಂಪಯ್ಯರ ಮಾತು ಕೇಳಿ ಅಮಿತ್ ಷಾ ಭೇಟಿ ಮಾಡಿದ್ದೀನಿ ಅಂತಾ ಸಿಎಂ ಹೇಳ್ತಿದ್ದಾರೆ…ಅಂದು ನಾನು ಮಹಾಲಕ್ಷ್ಮೀ ಲೇಔಟ್ ಅಭ್ಯರ್ಥಿ ಜೊತೆಯಲ್ಲಿದ್ದೆ..ಸುಖಾಸುಮ್ಮನೆ ಸುಳ್ಳು ಹೇಳಿಕೊಂಡು ಸಿಎಂ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮಗೆ ಸ್ಪಷ್ಟ ಬಹುಮತ ಬರಲಿದೆ ಅಧಿಕಾರ ರಚಿಸುತ್ತೇವೆಂದು ವಿಶ್ವಾಸವಿದೆ. ಒಂದು ವೇಳೆ ಸ್ಪಷ್ಟ ಬಹುಮತ ಬರದಿದ್ದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಹೆಚ್,ಡಿ.ಕೆ ಸ್ಪಷ್ಟನೆ‌ ನೀಡಿದ್ದಾರೆ.

Assembly election,H D kumaraswami,Hasana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ