ಸಿದ್ದರಾಮಯ್ಯ ಕಾಂಗ್ರೆಸ್‍ನ ಆಮದು ರಾಜಕಾರಣಿ ಎಂಬುದನ್ನು ಮರೆತಿದ್ದಾರೆ: ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ

ಬೆಂಗಳೂರು,ಏ.30-ಸಿದ್ದರಾಮಯ್ಯ ಕಾಂಗ್ರೆಸ್‍ನ ಆಮದು ರಾಜಕಾರಣಿ ಎಂಬುದನ್ನು ಮರೆತಿದ್ದಾರೆ. ಸೋನಿಯಾ ಗಾಂಧಿ ಸಹ ಇಂಪೆÇೀರ್ಟೆಡ್ ಯಾರು ಈ ನೆಲದ ಮಕ್ಕಳು ಎಂಬುದನ್ನು ಅವರು ನೆನಪಿಡಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ ನಡೆಸಿದರು.

ಅಮಿತ್ ಶಾ ನಿವಾಸದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಆಮದಾಗಿ ಬಂದವರು. ಸೋನಿಯಾ ಅವರು ಇಂಪೆÇೀರ್ಟೆಡ್, ಇನ್ನು ರಾಹುಲ್ ಗಾಂಧಿ ಏನು ಎಂದು ಪ್ರಶ್ನಿಸಿದ ಅವರು, ಯಾರು ಈ ನೆಲದ ಮಕ್ಕಳು ಎಂಬುದು ಅರಿತಿರಲಿ ಎಂದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ನಾವೆಲ್ಲಾ ಈ ನೆಲದ ಮಕ್ಕಳು . ಇದ್ಯಾವುದನ್ನೂ ತಿಳಿಯದ ಸಿದ್ದರಾಮಯ್ಯ ಸುಮ್ಮನೇ ಪ್ರಚಾರ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಮ್ಮದೊಂದು ರಾಜ್ಯ ಇದೆ. ನಮ್ಮದೇ ದೇಶ ಇದೆ .ಆದರೆ ಸೋನಿಯಾ ಮತ್ತು ರಾಹುಲ್ ಯಾವ ರಾಜ್ಯಕ್ಕೆ ಸೇರಿದವರು ಎಂದು ಪ್ರಶ್ನಿಸಿದರು.
ಒಳ ಒಪ್ಪಂದ: ಅಮಿತ್‍ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಭೇಟಿ ಕುರಿತಂತೆ ಮಾತನಾಡಿದ ಅವರು ನಾವು ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟು ಬಾರಿ ದೇವೇಗೌಡರ ಮನೆಗೆ ಹೋಗಿಲ್ಲ ಹೇಳಿ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಳ ಹಾಗೂ ಹೊರ ಒಪ್ಪಂದವಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ