ಶಿವಮೊಗ್ಗದಲ್ಲಿ ತಾರಕಕ್ಕೇರಿದ ತಮಿಳು ಸಮುದಾಯಗಳ ಸಂಘರ್ಷ

ಶಿವಮೊಗ್ಗ :ಏ-30: ತಮಿಳು ಸಮುದಾಯ, ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ಎಂಬ ಹೇಳಿಕೆ ಸ್ವಯಂಘೋಷಿತ ಸ್ವಾರ್ಥ ಮುಖಂಡರ ಹೇಳಿಕೆ ಎಂದು 17 ತಮಿಳು ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.

ಈಶ್ವರಪ್ಪ ವಿರುದ್ಧ ಪತ್ರಿಕಾಗೋಷ್ಠಿ ಮೂಲಕ ಅಪಾದಿಸಿದ್ದ ತಮಿಳು ಸಂಘಟನೆಗಳ ಒಕ್ಕೂಟದ ಮುಖಂಡರಿಗೆ ತಿರುಗೇಟು ನೀಡಿದ ಇತರೆ ತಮಿಳು ಸಂಘಟನೆಗಳ ಪ್ರಮುಖರು

17 ತಮಿಳು ಸಂಘಟನೆಗಳ ಪ್ರಮುಖರಿಂದ ರಾಜ್ ಶೇಖರ್, ಎಂ.ಪಿ. ಸಂಪತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.ಈಶ್ವರಪ್ಪ ವಿರುದ್ಧ ಆರೋಪಿಸಿದ್ದ ತಮಿಳು ಸಂಘಟನೆ ಮುಖಂಡರೆನಿಸಿಕೊಂಡಿರುವ ರಾಜ್ ಶೇಖರ್, ಎಂ.ಪಿ. ಸಂಪತ್ ಈಶ್ವರಪ್ಪ ಸಹಕಾರ ಪಡೆದು, ಅವರಿಗೇ ದ್ರೋಹ ಬಗೆಯಲಾಗಿದೆ ಎಂದು ಆರೋಪ ಮಾಡಿದರು.ತಮಿಳು ಸಮುದಾಯಕ್ಕೆ ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿ, ಕೆ.ಎಸ್.ಈಶ್ವರಪ್ಪ ನವರ ಜನಪರ ಕಾಳಜಿ ಯನ್ನು ಮರೆತು ಹಣಕ್ಕಾಗಿ ಕಾಂಗ್ರೆಸ್ ನವರ ಜೊತೆ ಇರುವುದಾಗಿ ಹೇಳಿದ ಮುಖಂಡರ ನಿಲುವು ಸರಿಯಲ್ಲ ಎಂದು ಹೇಳಿದರು. ಅಲ್ಲದೇ ತಮಿಳು ಜನಾಂಗ ಸಂಪೂರ್ಣ ಬಿ.ಜೆ.ಪಿ.ಪರವಾಗಿದೆ ಎಂದು ಘೋಷಣೆ ಕೂಗಿದರು. ಇದೇ ವೇಳೆ ಕೆ ಎಸ್ ಈಶ್ವರಪ್ಪ ಪರವೂ ಘೋಷಣೆ ಕೂಗಿದರು.

karnataka assemblya election,shivamoga,Tamil community,protest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ