ಮೇ 1ರಂದು ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಪೆಂಡಾಲ್ ಸಾಗಿಸುತ್ತಿದ್ದ ವಾಹನ ಅಪಘಾತ: ಮೂವರು ಕಾರ್ಮಿಕರ ಸಾವು

ಉಡುಪಿ:ಏ-29: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಪೆಂಡಾಲ್ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಹಿರಿಯಡ್ಕ ಠಾಣೆಯ ಪೆರ್ಡೂರು ಬಳಿ ನಡೆದಿದೆ.

ಚಿತ್ರದುರ್ಗದಿಂದ ಪೆಂಡಾಲ್ ಸಾಗಿಸುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತ ಕಾರ್ಮಿಕರ ಗುರುತು‌ ಪತ್ತೆಯಾಗಿಲ್ಲ.

ಮೇ 1ರಂದು ನಡೆಯಲಿದ್ದ ಮೋದಿ ಸಮಾವೇಶಕ್ಕೆ ಪೆಂಡಾಲ್ ಸಾಗಿಸಲಾಗುತ್ತಿತ್ತು. ವಾಹನದಲ್ಲಿ 10 ಮಂದಿ ಕಾರ್ಮಿಕರಿದ್ದರು ಎಂದು ತಿಳಿದುಬಂದಿದೆ.

karnataka assembly election,udupi,PM Modi rally, pendal lorry, accident

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ