ದಾವಣಗೆರೆಯಲ್ಲಿ ಅಮಿತ್ ಶ ಅರೋಡ್ ಶೋ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ

ದಾವಣಗೆರೆ :ಏ-೨೯: ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಅವರು ಇಂದು ದಾವಣೆಗೆರೆಗೆ ಭೇಟಿ ನೀಡಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು.

ಬೆಳಗ್ಗೆ ವಿಜಯಪುರದಿಂದ ೧೦.೩೦ಕ್ಕೆ ದಾವಣಗೆರೆಗೆ ಆಗಮಿಸುವ ಷಾ ಬಳಿಕ ನಗರ ದೇವತೆ ದುರ್ಗಾಂಭಿಕ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ೨೦ ನಿಮಿಷ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದರು. ನಂತರ 11-05 ಕ್ಕೆ ದೇವಸ್ಥಾನದಿಂದ ರೋಡ್ ಶೋ ನಡೆಸುವ ಸ್ಥಳಕ್ಕೆ ಆಗಮಿಸಿ 12.೩೦ ರಿಂದ 2. ೩೦ ರ ವರೆಗೆ ರೋಡ್ ಶೋ ನಡೆಸಿದರು .

ನಗರದ ಹೊಂಡದ ವೃತ್ತದಿಂದ ರೋಡ್ ಶೋ ನಡೆಸಿದ ಶಾ, ಅರುಣಾ ವೃತ್ತ, ರಾಮ್ ಅಂಡ್ ಕೋ ವೃತ್ತ, ರೆಡ್ಡಿ ಬಿಲ್ಡಿಂಗ್ ರೋಡ್, ವಿನೋಭ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೂಲಕ ರೋಡ್ ಶೋ ನಲ್ಲಿ ಅಭ್ಯರ್ಥಿಗಳ ಪರವಾಗಿ ಷಾಮತಯಾಚನೆ ನಡೆಸಿದರು.

ಶ್ರೀಶೈಲ ಮಠದ ಬಳಿ ರೋಡ್ ಶೋ ಮುಕ್ತಾಯ ಗೊಳಿಸಿ ನಂತರ 2.೩೦ ರ ವರೆಗೆ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಊಟ ಮುಗಿಸಿ ಇಲ್ಲೆ ಬಿಜೆಪಿ ಮುಖಂಡರ ಸಭೆ ನಡೆಸಿದರು. ಮೊದಲ ಬಾರಿಗೆ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಲಿರುವ ಅಮಿತ್ ಶಾ ಜೊತೆಯಲ್ಲಿ ಜಿಲ್ಲೆ ಸಂಸದ ಜಿ.ಎಂ.ಸಿದ್ದೇಶ್ವರ್ , ದಾವಣಗೆರೆ ಉತ್ತರ ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳಾದ ಎಸ್ ಎ ರವೀಂದ್ರನಾಥ್, ಯಶವಂತರಾವ್ ಜಾಧವ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

karnataka assembly election,Davangere,Amith shah,Road Show

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ