ಕಾಂಗ್ರೆಸ್ ಬೆಂಬಲಿತರ ಮೇಲೆ ಐಟಿ ದಾಳಿ ಮೂಲಕ ಬಿಜೆಪಿ ವರಿಷ್ಟರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ: ಸಿಎಂ ವಾಗ್ದಾಳಿ

ಬಾಗಲಕೋಟೆ:ಏ-29: ಕಾಂಗ್ರೆಸ್ ಬೆಂಬಲಿತರ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಈ ಸೇಡಿನ ರಾಜಕಾರಣ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಬೆಂಬಲಿಸುವರಿಗೆ ಭಯ ಹುಟ್ಟಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲೆ ಐಟಿ ದಾಳಿ ನಡೆಸುತ್ತಿದ್ದಾರೆ. ಈ ಐಟಿ ದಾಳಿಯ ಹಿಂದಿನ ರೂವಾರಿಗಳು ಪ್ರಧಾನಿ ಮೋದಿ ಹಾಗೂ ಶಾ ಏಂದು ಗುದುಗಿದರು.

ಅಮಿತ್ ಶಾಗೆ ಸಾಮಾಜಿಕ ನ್ಯಾಯ ಹಾಗೂ ಬಸವಣ್ಣನ ಮೇಲೆ ನಂಬಿಕೆಯೇ ಇಲ್ಲ. ಶಾ ಒಬ್ಬ ನಾಟಕಕಾರನಾಗಿದ್ದು, ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ಸುಳ್ಳು ಹೇಳುವುದೇ ಬಿಜೆಪಿಯವರ ದೊಡ್ಡ ಆಸ್ತಿ ಈ ನಿಟ್ಟಿನಲ್ಲಿ ಅವರು ಬಸವಣ್ಣನವರ ಐಕ್ಯ ಮಂಟಪಕ್ಕೂ ಭೇಟಿ ನೀಡಿಲ್ಲ ಎಂದರು.

Karnataka assembly election,CM Siddaramaiah,Bagalakote

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ