* ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಪ್ರಚಾರ ಹುಮನಾಬಾದ್ ಮಾದರಿ ಕ್ಷೇತ್ರ ವಿಜನ್

* ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಪ್ರಚಾರ
ಹುಮನಾಬಾದ್ ಮಾದರಿ ಕ್ಷೇತ್ರ ವಿಜನ್

ಬೀದರ್, ಏ. 28, ಹುಮನಾಬಾದ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಮಾಡುವೆ ಎಂದು ಹುಮನಾಬಾದ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಹೇಳಿದರು.

ಹುಮನಾಬಾದ್ ಕ್ಷೇತ್ರದ ಘಾಟಬೋರಾಳದಲ್ಲಿ ನಡೆದ ಪ್ರಚಾರದಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ಅಭಿವೃದ್ಧಿಯಾಗಲಿಲ್ಲ. ಕೊಲೆ, ಸುಲಿಗೆ, ಅತ್ಯಾಚಾರ, ರೈತ ಆತ್ಮಹತ್ಯೆಗಳು ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಾಗಿವೆ ಎಂದು ದೂರಿದರು.

ಬಹುರಾಷ್ಟ್ರೀಯ ಕಂಪನಿಗಳಿಗೆ ಇತ್ತ ಆಕರ್ಷಿಸಿ, ದೊಡ್ಡ ಉದ್ಯಮ ತಂದು ನಿರುದ್ಯೋಗಿಗಳ ಕೈಗೆ ಕೆಲಸ ಕೊಡುವುದು ಸೇರಿ ಹುಮನಾಬಾದ್ ಕ್ಷೇತ್ರ ಮಾದರಿ ಮಾಡುವ ವಿಜನ್ ನನ್ನದು. ಕ್ಷೇತ್ರದ ಎಲ್ಲರೂ ಈ ಬಾರಿ ಬಿಜೆಪಿಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ