ಮಾಜಿ ಸಚಿವ ಜನಾರದನ ರೆಡ್ಡಿ ಮನೆ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿದ ಚುನಾವಣಾ ಆಯೋಗ

ಚಿತ್ರದುರ್ಗ:ಏ-28: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚಿತ್ರದುರ್ಗದ ಅವರ ನಿವಾಸದ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಸ್ನೇಹಿತ ಶ್ರೀರಾಮುಲು ಅವರ ಪರವಾಗಿ ಕ್ಷೇತ್ರದಲ್ಲಿದ್ದುಕೊಂಡೇ ಜನಾರ್ದನ ರೆಡ್ಡಿ ರಣತಂತ್ರ ಹೆಣೆಯುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.

ಮೊಳಕಾಲ್ಮೂರಿನ ಹಾನಗಲ್​ ಎಂಬಲ್ಲಿ ರೆಡ್ಡಿ ವಾಸ್ತವ್ಯ ಹೂಡಿರುವ ಮನೆಯ ಬಳಿಯೇ ಚುನಾವಣಾ ಆಯೋಗ ಚೆಕ್​ ಪೋಸ್ಟ್​ ನಿರ್ಮಿಸಿದೆ. ಏ. 26ರಿಂದ ರೆಡ್ಡಿ ಮನೆ ಬಳಿಯೇ ಚೆಕ್​ ಪೋಸ್ಟ್​ ನಿರ್ಮಿಸಿರುವ ಆಯೋಗ, ರೆಡ್ಡಿ ನಿವಾಸಕ್ಕೆ ಬಂದು ಹೋಗುವ ವಾಹನಗಳನ್ನು ತಪಾಸಣೆ ಮಾಡುತ್ತಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

BJP,Janardhan Reddy,Election Commission,Check post,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ