ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ: ಶ್ರೀಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ

ಮಂಗಳೂರು: ಏ- 27: ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಧರ್ಮಸ್ಥಳಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮಂಜುನಾಥೇಶ್ವರನಿಗೆ ವಿಶೇಪೂಜೆ ಸಲ್ಲಿಸಿದ ರಾಹುಲ್ ಗಾಂಧಿ, ಫಲಕಾಣಿಕೆ ಅರ್ಪಿಸಿದರು.ಶ್ರೀ ಕ್ಷೇತ್ರ ಕ್ಕೆ ರಾಹುಲ್ ಗಾಂಧಿ ಎರಡನೇ ಭೇಟಿ ಇದಾಗಿದೆ.

ಒಂಭತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನಗಳ ಸಿಬ್ಬಂದಿಯನ್ನು ರಾಹುಲ್ ಗುರುತು ಹಿಡಿದಿದ್ದಾರೆ. ನಿಮ್ಮನ್ನು ನೋಡಿದ ನೆನಪಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ ಎದುರು ರಾಹುಲ್ ಗಾಂಧಿ ಸಂಕಲ್ಪವನ್ನೂ ಮಾಡಿದರು. ಜೊತೆಗೆ ಪ್ರಸಾದ ಸ್ವೀಕರಿಸಿದರು

Rahul gandhi,visit, shri kshetra dharmastala

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ