ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಿ.ವಿ.ಚಂದ್ರಶೇಖರಗೆ ಬಿ.ಪಾರಂ ಕೈತಪ್ಪಿದ್ದರಲ್ಲಿ ನನ್ನ ಕೈವಾಡವಿಲ್ಲ: ಸಂಗಣ್ಣ

ಕೊಪ್ಪಳ ಏ೨೭: ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಂಸದ ಕರಡಿ ಸಂಗಣ್ಣರವರು ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಿ.ವಿ.ಚಂದ್ರಶೇಖರಗೆ ಬಿ.ಪಾರಂ ಕೈತಪ್ಪಿದ್ದರಲ್ಲಿ ನನ್ನ ಕೈವಾಡವಿಲ್ಲ, ಕ್ಷೇತ್ರದ ಬಿ.ಪಾರಂ ನನ್ನ ಕೈಗೆ ಕೊಟ್ಟಿರಲಿಲ್ಲ ಎಂದರು.

ನನ್ನ ಮಗ ಅಮರೇಶಗೆ ಟಿಕೆಟ್ ಕೊಟ್ಟಿದ್ದಲ್ಲಿ ಕುಟುಂಬ ರಾಜಕಾರಣ ಅಂತಿದ್ದೀರಿ, ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿಲ್ಲಾ ? ಎಲ್ಲ ಕಡೆಯೂ ಇದೆ. ಆದರೆ ನಾವು ಟಿಕೆಟ್ ಕೊಡುವುದಕ್ಕೂ ಮೊದಲು ಕಾರ್ಯಕರ್ತರ ಮತ್ತು ಜನಸಾಮಾನ್ಯರ ಟ್ರೆಂಡ್ ತಿಳಿದುಕೊಳ್ಳಬೇಕಿತ್ತು.

ಮಾಜಿ ಸಂಸದರಾದ ಶಿವರಾಮಗೌಡ,‌ ಕೆ.ವಿರುಪಾಕ್ಷಪ್ಪ ಪಕ್ಷ ಬಿಟ್ಟಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಅವರ ಮನವೊಲಿಸುವ ಕೆಲಸ ಮಾಡಲಾಗಿತ್ತು

ಇನ್ನು ನಾಳೆ ಅಮಿತ್ ಶಾ ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ. ವಿವಿದೆಡೆ ಕಾರ್ಯಕ್ರಮಗಳು ಇವೆ. ಇವತ್ತು ನರೇಂದ್ರ ಮೋದಿಯವರ ಸಂವಾದ ಮಾರ್ಗದರ್ಶಿ ಯಾಗಿತ್ತು. ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ