`ನಾನೊಬ್ನೆ ಒಳ್ಳೇವ್ನು’ ವಿಜಯ್ ಮಹೇಶ್ ಅವರ ನೂತನ ಚಿತ್ರ `ಐ ಕಮಿಂಗ್’

ಕಳೆದ ವರ್ಷ ತೆರೆಕಂಡ `ನಾನೊಬ್ನೆ ಒಳ್ಳೇವ್ನು` ಚಿತ್ರವನ್ನು ನಿರ್ದೇಶಿಸಿ, ನಾಯಕನಾಗೂ ನಟಿಸಿದ್ದ ವಿಜಯ್ ಮಹೇಶ್ ಈಗ `ಐ ಕಮಿಂಗ್` ಎಂಬ ನೂತನ ಚಿತ್ರ ನಿರ್ದೇಶಿಸುತ್ತಿದ್ದಾರೆ.
ವಿಜಯ್ ಮಹೇಶ್ ನಾಯನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಬಾಲಿವುಡ್‍ನ ಇಹಾನ ದಿಲ್ಲಾನ್ ನಟಿಸುತ್ತಿದ್ದಾರೆ. ಇವರು ಇತ್ತೀಚೆಗೆ ತೆರೆಕಂಡ ಬಾಲಿವುಡ್‍ನ `ಹೇಟ್ ಸ್ಟೋರಿ 4` ಚಿತ್ರದಲ್ಲಿ ನಟಿಸಿದ್ದರು. ಇಹಾನ ಅವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ ವಿಜಯ್ ಮಹೇಶ್. ಬಾಲಿವುಡ್‍ನ ಮುಖೇಶ್ ರಿಷಿ `ಐ ಕಮಿಂಗ್`(ಹಿಂದಿ) ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರ ಕನ್ನಡ ಹಾಗೂ ಹಿಂದಿ ಭಾಷಗಳಲ್ಲಿ ನಿರ್ಮಾಣವಾಗುತ್ತಿದ್ದು, ಮೇ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ವಿಜಯ್ ಮಹೇಶ್ ಹಾಗೂ ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಪ್ರದೀಪ್ ವರ್ಮ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ