ಈ ವಾರ ತೆರೆಗೆ `ಕಾನೂರಾಯಣ’

ಶ್ರೀಕ್ಷೇತ್ರ ಧರ್ಮಸ್ಥಳ ಪರಮಪೂಜ್ಯ ಡಾ||ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯಸಂಘಗಳ ಒಕ್ಕೂಟ ಟ್ರಸ್ಟ್ ಅರ್ಪಿತ, ಶ್ರುತಾಲಯ ಫಿûಲಂಸ್ ನಿರ್ಮಿತ `ಕಾನೂರಾಯಣ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಟಿ.ಎಸ್.ನಾಗಾಭರಣ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪನ್ನಗಾಭರಣ ಅವರ ಸಹ ನಿರ್ದೇಶನವಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜು ಅವರ ಸಂಕಲನವಿರುವ ಈ ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆಯನ್ನು ಹರೀಶ್ ಹಾಗಲವಾಡಿ, ಡಾ||ಎಲ್.ಎಚ್.ಮಂಜುನಾಥ್, ಅವಿನಾಶ್ ಬಲೆಕ್ಕಳ್ ಬರೆದಿದ್ದಾರೆ. ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಸುಂದರ್ ರಾಜ್, ಗಿರಿಜಾ ಲೋಕೇಶ್, ಕರಿ ಸುಬ್ಬು, ಚಂದ್ರು(ಕಡ್ಡಿಪುಡಿ), ನೀನಾಸಂ ಅಶ್ವಥ್ಥ್, ಮನು ಹೆಗ್ಡೆ, ಜಾನ್ಹವಿ ಜ್ಯೋತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ