ಈ ವಾರ ತೆರೆಗೆ `ಬಕಾಸುರ’

ಪದ್ಮಾವತಿ ಪಿಕ್ಚರ್ಸ್ ಲಾಂಛನದಲ್ಲಿ ರೋಹಿತ್ ಹಾಗೂ ತಂಡದವರು ನಿರ್ಮಿಸಿರುವ `ಬಕಾಸುರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕರಾಗಿ ಆರ್.ಜಿ.ರೋಹಿತ್ ನಟಿಸಿದ್ದಾರೆ.
ನವನೀತ್ ನಿರ್ದೇಶನದ ಈ ಚಿತ್ರಕ್ಕೆ 50 ದಿನಗಳ ಕಾಲ ಕರ್ನಾಟಕ ಹಾಗೂ Œಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಹಿಂದೆ `ಕರ್ವ` ಎಂಬ ವಿಭಿನ್ನ ಚಿತ್ರವನ್ನು ಈ ತಂಡ ನಿರ್ಮಿಸಿತ್ತು. ಈಗ ಅದೇ ತಂಡದಿಂದ ನಿರ್ಮಾಣವಾಗಿರುವ ಮತ್ತೊಂದು ಅದ್ದೂರಿ ಚಿತ್ರ `ಬಕಾಸುರ`.
ಸೈಕಾಲಜಿ ಥ್ರಿಲ್ಲರ್ ಆಧಾರಿತ ಈ ಚಿತ್ರ ಪ್ರೇಕ್ಷಕರಿಗೆ ಪ್ರತಿಯೊಂದು ಸನ್ನಿವೇಶಗಳಲ್ಲೂ ಕುತೂಹಲ ಹುಟ್ಟಿಸುತ್ತದೆ. ನಾವು ಏನು ಅಂದುಕೊಳ್ಳುತ್ತೇವೊ ಅದು ಆಗುವುದಿಲ್ಲ. ಅದು ಚಿತ್ರದ ವಿಶೇಷತೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.
ಅವಿನಾಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ವೆಂಕಿ ಯುಡಿವಿ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಾಜಾಸಿಂಹ ಅವರು ಬರೆದಿರುವ ಕಥೆಗೆ ರೋಹಿತ್ ಹಾಗೂ ನವನೀತ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಾನ್ವರೀಶ್ ಅವರು ಗೀತರಚನೆ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಆರ್.ಜೆ.ರೋಹಿತ್, ಸಿತಾರಾ, ಸಾಧುಕೋಕಿಲ, ಸುಚೀಂದ್ರ ಪ್ರಸಾದ್, ಸಿಹಿಕಹಿ ಚಂದ್ರು, ವಿಜಯ್ ಚಂಡೂರ್, ಕವ್ಯಾಗೌಡ, ಶಶಿಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ