ಮೈಸೂರಿಗೆ ಬಂದಿಳಿದ ಬಿಎಸ್‌ಪಿ ನಾಯಕಿ ಮಾಯಾವತಿ…!

ಮೈಸೂರು,ಏ.25: ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇಂದು ಮಧ್ಯಾಹ್ನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದರು.
ವಿಮಾನ ನಿಲ್ದಾಣದಿಂದ ನಗರದ ಖಾಸಗಿ ಹೋಟೆಲ್‌ಗೆ ತೆರಳಿರುವ ಮಾಯಾವತಿ, ಮೈಸೂರು ಭಾಗದ ಬಿಎಸ್‌ಪಿ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಚುನಾವಣೆ ರಣತಂತ್ರದ ಸಭೆ‌ ನಡೆಸಲಿದ್ದು, ಎರಡು ಪಕ್ಷಗಳ ಮೈತ್ರಿಕೂಟಕ್ಕೆ ಗೆಲುವಿನ ಶ್ರೀ ರಕ್ಷೆ ಹೆಣೆಯಲು ಮಾಜಿ‌ ಪ್ರಧಾನಿ ದೇವೇಗೌಡರೊಂದಿಗೆ ಪ್ರಧಾನವಾಗಿ ಚಚೆ೯ ನಡೆಸಲಿದ್ದಾರೆ.
ಜೆಡಿಎಸ್ ಹಾಗೂ ಬಿಎಸ್‌ಪಿ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿದಿರುವ ಅಭ್ಯಥಿ೯ಗಳ ಚುನಾವಣೆ ತಂತ್ರಗಾರಿಕೆಯ ಚಚೆ೯ ನಡೆಸಿದ ಬಳಿಕ ಮಹಾರಾಜು ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ನಂತರ ಉತ್ತರಪ್ರದೇಶಕ್ಕೆ ತೆರಳಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ