ಹಸಿರು ಬೆಂಗಳೂರು ಗುರಿ: ಶ್ರೀ ಅನಂತ ಕುಮಾರ್

ಬೆಂಗಳೂರು(ಏ.25):- ಇಂದು 3ನೇ ಆವೃತ್ತಿಯ ನವ ಬೆಂಗಳೂರಿನಿಂದ ನವ ಭಾರತ ನಿರ್ಮಾಣ ಚರ್ಚೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್
ಅವರು ‘ಹಸಿರು ಬೆಂಗಳೂರು’ ಗುರಿಗೆ ಕರೆ ನೀಡಿದರು

3 ದಶಕಗಳ ಹಿಂದೆ ಬೆಂಗಳೂರು ನಗರದ ಸರಾಸರಿ ಉಷ್ಣಾಂಶ ಶೇ.19ರಷ್ಟಿತ್ತು . ಭಾರತೀಯ ವಿಜ್ಞಾನ ಸಂಸ್ಥೆ ವರದಿಯಂತೆ ನಗರದಲ್ಲಿ 15.5 ಲಕ್ಷ ಮರಗಳಿವೆ. ಅಂದ ರೆ, ಒಬ್ಬ ವ್ಯಕ್ತಿಗೆ 7 ಮರ ಇರಬೇಕಾದ ಕಡೆ 7 ಜನಕ್ಕೆ ಒಂದು ಮರವಿದೆ. ಹಸಿರು
ಬೆಂಗಳೂರು ನಿರ್ಮಾಣದ ಗುರಿಯೊಂದಿಗೆ ಅದ ಮ್ಯ ಚೇತನ ಪ್ರತಿಷ್ಠಾನ ಒಂದು ಕೋಟಿ ಗಿಡ ನೆಡುವ ಗುರಿ ಹೊಂದಿದೆ.

ನಾಗರಿಕರು ಸಹ ವರ್ಷಕ್ಕೆ ಒಂದು ಗಿಡ , ಹುಟ್ಟಿದ ಹಬ್ಬಕ್ಕೆ ಒಂದು ಗಿಡ ನೆಡುವ ಸಂಕಲ್ಪ ಮಾಡಬೇಕು ಎಂದು ಶ್ರೀ ಅನಂತ ಕುಮಾರ್ ಮನವಿ ಮಾಡಿದರು. ಬಿಜೆಪಿ ರಾಜ್ಯ ಸಹವಕ್ತಾರರಾದ ಶ್ರೀಮತಿ ಮಾಳವಿಕ ಅವಿನಾಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ