ಸೂರ್ಯಕಾಂತ ನಾಗ್ಮಾರಪಳ್ಳಿ ನಾಮಪತ್ರ ಸಲ್ಲಿಕೆ

ಬೀದರ್ ಏ.24- ಬೀದರ್ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯುವ ಮುಖಂಡ, ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಮಂಗಳವಾರ ಮತ್ತೊಂದು ನಾಮಪತ್ರ ಸಲ್ಲಿಸಿದರು. ಶನಿವಾರ ಒಂದು ಬಾರಿ ಸೂರ್ಯಕಾಂತ ನಾಮಪತ್ರ ಸಲ್ಲಿಕೆ ಮಾಡಿದರು.

ಮಂಗಳವಾರ ಜಿ¯್ಲÁಧಿಕಾರಿ ಕಚೇರಿಗೆ ಆಗಮಿಸಿ, ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ, ಮುಖಂಡರಾದ ಗುರುನಾಥ ಕೊಳ್ಳುರ್, ಜಯಕುಮಾರ ಕಾಂಗೆ, ಉದಯಭಾನು ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸೂರ್ಯಕಾಂತ, ಕ್ಷೇತ್ರದಲ್ಲಿ ಉತ್ತಮ ಅಲೆ ಕಂಡಿದೆ. ಜನರ ಬೆಂಬಲ, ಪ್ರೀತಿ, ಉತ್ಸಾಹ ನೋಡಿದರೆ ನನಗಿಲ್ಲಿ ಎದುರಾಳಿ ಯಾರೂ ಇಲ್ಲ ಎಂಬಂತೆ ಕಾಣುತ್ತಿದೆ. ಸೇವೆ ಸಲ್ಲಿಸಲು ಜನತೆ ಅವಕಾಶ ಕೊಡುತ್ತಾರೆ ಎಂಬ ಅಚಲ ನಂಬಿಕೆಯಿದೆ. ಎಲ್ಲ ವರ್ಗದ ಹಿತ, ಏಳ್ಗೆಗೆ ದುಡಿಯುವುದೇ ನನ್ನ ಧ್ಯೇಯ. ಎಲ್ಲರ ಋಣ ತೀರಿಸುವ ಕೆಲಸ ಮಾಡುವೆ. ಬೀದರ್ ಮಾದರಿ ಮಾಡುವ ವಿಜನ್ ಇದೆ. ಇದಕ್ಕೆ ನನ್ನದೇ ಆದ ವಿಶಿಷ್ಟ ಕಾರ್ಯಯೋಜನೆ ಹೊಂದಿರುವೆ ಎಂದರು.

ಈ ವೇಳೆ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಭುರಾವ ವಸ್ಮತೆ, ಡಾ. ರಜನೀಶ್ ವಾಲಿ, ಜಗದೀಶ್ ಬಿರಾದಾರ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ