ಅಂಬರೀಷ್ ಗೆ ಬಿ ಫಾರಂ ನೀಡಿದ್ದೇವೆ, ಸ್ಪರ್ಧೆ ಮಾಡಬೇಕು ಅಷ್ಟೆ!

ಮೈಸೂರು,ಏ.21

ನಾನು ಅಂಬರೀಷ್‌ ಅವರ ಮನವೊಲಿಸಲು ಯಾವುದೇ ಮಾತುಕತೆ ನಡೆಸಲು ಮುಂದಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿಳಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನೀವು ಯಾಕೆ ಇದನ್ನು ವಿಷ್ಯ ಮಾಡುತ್ತೀರಿ.  ಬಿ ಫಾರಂ ನೀಡುವುದು ನಾನಲ್ಲ, ಪಕ್ಷದ ಅಧ್ಯಕ್ಷರು. ಅಂಬರೀಷ್‌ ಅವರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿದ್ದೇವೆ ಅವರು ಸ್ಪರ್ಧೆ ಮಾಡಬೇಕು ಅಷ್ಟೆ ಎಂದರು.

ಇನ್ನು ನನಗೆ ಬಾದಾಮಿಯಲ್ಲಿ ಸ್ಪರ್ಧಿಸಲೇಬೇಕೆಂದೇನಿಲ್ಲ, ಅಲ್ಲಿನ ಕಾರ್ಯಕರ್ತರು, ಮುಖಂಡರ ಒತ್ತಡವಿದೆ. ಈ ಬಗ್ಗೆ ಚರ್ಚಿಸಿ ತಿಳಿಸುತ್ತೇನೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ