ಈ ವಾರ ತೆರೆಗೆ `ಸಾಗುವ ದಾರಿಯಲ್ಲಿ’

ಶಿವಶಕ್ತಿ ಮೂವೀಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಶ್ರೀಮತಿ ಸುಜಾತ ರಾಜಪ್ಪ ಅವರು ನಿರ್ಮಿಸಿರುವ `ಸಾಗುವ ದಾರಿಯಲ್ಲಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶಿವಕುಮಾರ್ ಸಿ.ಎಸ್.ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್.ನಾಗು ಸಂಗೀತ ನೀಡಿದ್ದಾರೆ. ಸೂರ್ಯಕಾಂತ್ ಹೊನ್ನಳಿ ಛಾಯಾಗ್ರಹಣ, ಡಿ.ಹೆಚ್.ಸುರೇಶ್ ಸಂಕಲನ, ಸೂರಿ ನೃತ್ಯ ನಿರ್ದೇಶನ, ಡಿ¥sóÀರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ಅನೂಪ್ ಸಾ.ರಾ.ಗೋವಿಂದು ಅಭಿನಯಿಸಿದ್ದಾರೆ. ಪವಿತ್ರ ಗೌಡ, ದೇವರಾಜ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಸತ್ಯಜಿತ್, ಜೈಜಗದೀಶ್, ಹನುಮಂತೇ ಗೌಡ, ಪವನ್, ಜಹಂಗೀರ್, ಅರುಣ ಬಾಲರಾಜ್, ಸುನೇತ್ರ ಪಂಡಿತ್, ಸುಚಿತ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಶಿವಕುಮಾರ್ ಸಿ.ಎಸ್.ಗೌಡ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ