ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಅನ್ಯ ಪಕ್ಷದ ಮುಖಂಡರುಗಳ ಸೇರ್ಪಡೆ

ಇಂದು ಬೆಂಗಳೂರಿನ ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಸಿವಿರಾಮನ್ ನಗರದ ಪಿ ರಮೇಶ್, ಚಿಕ್ಕಪೇಟೆ ಕ್ಷೇತ್ರದ ಹೇಮಚಂದ್ರಸಾಗರ್, ಆರ್ ಆರ್ ನಗರದ ಜಿ ಹೆಚ್ ರಾಮಚಂದ್ರ ಹಾಗೂ ಆರ್ ಆರ್ ನಗರದ ಹನುಮತರಾಯಪ್ಪ ಜೆಡಿಎಸ್ ಸೇರ್ಪಡೆಗೊಂಡರು.

ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಹೇಳಿಕೆ

ಇಂದು ಅತ್ಯಂತ ಸಂತೋಷದ ದಿನ ಹಲವು ಪ್ರಭಾವಿ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ.

ದಿನೇ ದಿನೇ ಪಕ್ಷ ಬಲಿಷ್ಠ ಆಗುತ್ತಿದೆ ಜನರ ಆಶೀರ್ವಾದ ಕುಮಾರಸ್ವಾಮಿ ಗೆ ಸಿಗುತ್ತಿದೆ. ನಾನು ಯಾವಾಗಲೂ ದೈವದಲ್ಲಿ ನಂಬಿಕೆ ಇಟ್ಟವನು ಈ ಭಾರಿ ಪಕ್ಷ ಅಧಿಕಾರಕ್ಕೆ ಬರುತ್ತದೆ

ದಿನೆ ದಿನೆ ಪಕ್ಷದ ಶಕ್ತಿ ಹೆಚ್ಚಾಗುತ್ತಿದೆ ಈ ಸಾರಿ ಸಂಶಯವೇ ಇಲ್ಲ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೆ ಬರುತ್ತದೆ.

ನಾಳೆ ಮತ್ತೆ ರಾಯಚೂರು ಹುಬ್ಬಳ್ಳಿಯಿಂದ ಅನ್ಯ ಪಕ್ಷದ ಮುಖಂಡರು ಜೆ.ಡಿ.ಎಸ್.ಗೆ ಸೆರ್ಪಡೆ ಆಗಲಿದ್ದಾರೆ

ಇನ್ನೋಂದು ನಾಲ್ಕೈದು ದಿನಗಳ ಕಾಲ ಸಾಕಷ್ಟು ಅನ್ಯ ಪಕ್ಷದ ಮುಖಂಡರು ನಮ್ಮ ಪಕ್ಷಕ್ಕೆ ಸೆರ್ಪಡೆ ಆಗಲಿದ್ದಾರೆ

ಈ ಎಲ್ಲ ಬೆಳವಣಿಗೆ ನೊಡಿದ್ರೆ ಬೆಂಗಳೂರು ನಗರದಲ್ಲಿ ಕನಿಷ್ಟ 12 ರಿಂದ 15 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೆವೆ ಎಂಬ ವಿಶ್ವಾಸ ಇದೆ
ಜೆಡಿಎಸ್ ಗೆ ಈ ಪ್ರಭಾವಿ ನಾಯಕರುಗಳು ಸೇರ್ಪಡೆ ಆಗಿರೋದೆ ಇದಕ್ಕೆ ಕಾರಣ
ಎಲ್ಲಿಯೂ ಒಡಕು ಬರದಂತೆ ನೋಡಿಕೊಳ್ಳಬೇಕು

ರಾಜ್ಯದಲ್ಲಿ ಅತ್ಯಂತ ಕೀಳು ಮಟ್ಟದ ಆಡಳಿತ ಇದೆ ಜನತೆ ಬೇಸರಗೊಂಡಿದ್ದಾರೆ

ಇದೆಲ್ಲರ ನಡುವೇ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ್ರೂ ಅದನ್ನ ಸರಿಪಡಿಸಲು ಒಂದು ವರ್ಷ ಬೇಕು ನಾನು ನಿಮ್ಮ ನಡುವೆ ಇದ್ದು ಸಲಹೆ ನೀಡುತ್ತೇನೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ