ರಾಯಚೂರು ನಗರಕ್ಕೆ ಕಾಂಗ್ರೆಸ್‌ ಟಿಕೆಟ್ ಘೋಷಣೆ ಮಾಡದ ಹಿನ್ನಲೆ; ಕಾರ್ಯಕರ್ತರ ಪ್ರತಿಭಟನೆ; ಲಘು ಲಾಠಿ ಪ್ರಹಾರ

ರಾಯಚೂರು:ಏ-17: ರಾಯಚೂರು ನಗರ ಕ್ಷೇತ್ರಕ್ಕೆ  ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡದೇ ಇರುವುದರಿಂದ ಕಾಂಗ್ರೆಸ್ ನ ಕಾರ್ಯಕರ್ತರು ಕಾಂಗ್ರೆಸ್ ಕಛೇರಿ ಎದುರು ಘೋಷಣೆ ಹಾಕಿದ ಹಿನ್ನಲೆ ಪೋಲಿಸರು ರಸ್ತೆಗಿಳಿದು ನೆರೆದಿದ್ದ ಕಾರ್ಯಕರ್ತರಿಗೆ ಲಾಠಿ ಬಿಸಿ ತೋರಿಸಿದರು.

ನಗರದ ಕಾಂಗ್ರೆಸ್ ಕಚೇರಿ ಎದುರು ನೂರಾರು ಕಾರ್ಯಕರ್ತರು ಜಮಾಹಿಸಿ ನಗರ ಕ್ಷೇತ್ರಕ್ಕೆ ಇನ್ನೂ ಟಿಕೇಟ್ ನ್ನು ಘೋಷಣೆ ಮಾಡದೇ ಕಾರ್ಯಕರ್ತರನ್ನು ದಾರಿತಪ್ಪಿಸುತ್ತಿದ್ದಾರೆ.
ಟಿಕೇಟ್ ನೀಡುವುದನ್ನು ನಿಗೂಡಪಡಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಹೈಕಮಾಂಡ ವಿರುದ್ಧ ಘೋಷಣೆ ಹಾಕಿದರು.

ಕಾಂಗ್ರೆಸ್​​ ಟಿಕೆಟನ್ನು ಸೈಯದ್ ಯಾಸೀನ್​​​​​​​​​​​​ಗೆ ನೀಡುವಂತೆ ಬೆಂಬಲಿಗರು ಒತ್ತಾಯಿಸಿದರು ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಎಸ್ಪಿ ಕಿಶೋರ್ ಬಾಬು ಲಾಠಿ ಹಿಡಿದು ಕೆಳಗಿಳಿಯುತ್ತಲೆ ಅಲ್ಲಿಂದ ಕಾರ್ಯಕರ್ತರು ಮತ್ತಷ್ಟು ಘೋಷಣೆ ಹಾಕಿದರು. ಈ ವೇಳೆ ಗುಂಪು ಚದುರಿಸಲುವ ಸಲುವಾಗಿ ಲಘು ಲಾಠಿ ಚಾರ್ಜ ಮಾಡಲಾಯಿತು. ನೆರೆದಿದ್ದ ಕಾರ್ಯಕರ್ತರ ಅಲ್ಲಿಂದ ಕಾಲ್ಕಿತ್ತರು.

ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.ಒಂದು ಕಿ.ಮೀ.ವರೆಗೆ ರಸ್ತೆ ಬಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.

Assembly election,Raichuru,Congress,suppoters protest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ