ಅಖಿಲ ಭಾರತೀಯ ಹಿಂದೂ ಮಹಾಸಭಾ 48 ಅಭ್ಯರ್ಥಿಗಳ ಮೊದಲನೆಯ ಪಟ್ಟಿ ಬಿಡುಗಡೆ

ಬೆಂಗಳೂರು ಏ15: ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ, ಅಖಿಲ ಭಾರತೀಯ ಹಿಂದೂ ಮಹಾಸಭಾ ರವರು, ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ಒಟ್ಟು 48 ಅಭ್ಯರ್ಥಿಗಳ ಮೊದಲನೆಯ ಪಟ್ಟಿ ಬಿಡುಗಡೆ ಮಾಡಿದರು. ಅದರಲ್ಲಿ 35 ಅಭ್ಯರ್ಥಿಗಳು ಅಖಿಲ ಭಾರತೀಯ ಹಿಂದೂ ಮಹಾಸಭಾ ದಿಂದ ನಿಲ್ಲುವುದಾದರೆ, ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿ ಇಂದ 13 ಅಭ್ಯರ್ಥಿಗಳು ಚುನಾವಣೆ ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪತ್ರಿಕಾ ಘೋಷ್ಠಿಯಲ್ಲಿ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾದ ಸುಬ್ರಹ್ಮಣ್ಯ ರಾಜುರವರು ಮಾತನಾಡಿ ನಮ್ಮ ಹಿಂದುತ್ವ ಒಂದು ಧರ್ಮವಲ್ಲ , ಅದು ಒಂದು ವಿಚಾರ ಧಾರೆ, ಜೀವನ ಶೈಲಿ ಮತ್ತು ಒಂದು ನಾಗರಿಕತೆ. ಧರ್ಮ ಎಂದು ನಾವು ಇದ್ದಿದ್ದರೆ, ಅಯೋಧ್ಯದಲ್ಲಿ ವಕಾಲತ್ ಇದ್ದಿದ್ರೂ ನಾವು ಅದನ್ನ ಚುನಾವಣೆಗೋಸ್ಕರ ಉಪಯೋಗಿಸಕೊಳ್ಳಲಿಲ್ಲ ಮತ್ತು ಅದರಿಂದ ಲಾಭ ಪಡೆದುಕೊಳ್ಳುವುದಿಲ್ಲ. ಆದರಿಂದ ಎಲ್ಲೆಲ್ಲಿ ನಾವು ಹಿಂದುತ್ವ ಎಂದು ಉಪಯೋಗಿಸಿದ್ದಾಗ ಅದನ್ನು ವಿಚಾರಧಾರೆ ಎಂದು ನೋಡಬೇಕು, ಧಾರ್ಮ ಅಂತ ಅಲ್ಲ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿಯವರು ಒಂದೇ ನಾಣ್ಯದ ಎರಡು ಮುಖಗಳಾಗಿ ಬಿಟ್ಟಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ, ಹಾಗಾಗಿ ನಾವು ಅವರಿಗೆ ಪಾಠ ಕಲಿಸಲು ಮುಂದಾಗಿದ್ದೇವೆ ಅಂದರು. ನಾವು ಭ್ರಷ್ಟಾಚಾರ ಮತ್ತು ಆತಂಕವಾದ ವಿಚಾರವನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ.

ಇನ್ನು 10 ಅಭ್ಯರ್ಥಿಗಳ ವಿಶ್ಲೇಷಣೆ ನಡಿತ್ತಿದ್ದು ಅವರನ್ನು ಅಂತಿಮ ಎಂದು ತೀರ್ಮಾನ ಆಗಿದ್ದಲ್ಲಿ ಎರಡನೆಯ ಪಟ್ಟಿ ಬಿಡುಗಡೆ ಮಾಡುತ್ತೇವೆ ಅಂದರು.

ಈ ದಿನ ಅವರು ಅಭ್ಯರ್ಥಿಗಳ ಪಟ್ಟಿ ಜೊತೆಗೆ ಚುನಾವಣಾ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದರು. ಮೊದಲನೇ ಪಟ್ಟಿಯ ಹೆಸರುಗಳು ಹೀಗಿವೆ

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ